ಯೆಹೆಜ್ಕೇಲನು 45:8

ಈ ಭೂಮಿಯು ಅವನಿಗೆ ಇಸ್ರಾಯೇಲಿನಲ್ಲಿ ಸ್ವಾಸ್ತ್ಯವಾಗಿರುವದು; ಆಗ ನನ್ನ ಪ್ರಭುಗಳು ನನ್ನ ಜನರನ್ನು ಉಪದ್ರವಪಡಿಸು ವದೇ ಇಲ್ಲ; ಉಳಿದ ಭೂಮಿಯನ್ನು ಇಸ್ರಾಯೇಲಿನ ಮನೆತನದವರಿಗೆ ಅವರ ಗೋತ್ರಗಳ ಅನುಸಾರವಾಗಿ ಕೊಡಲ್ಪಡುವದು.

ಸಂದರ್ಭದೊಂದಿಗೆ ಓದಿ · ಯೆಹೆಜ್ಕೇಲನು 45

6ನೀವು ಪಟ್ಟಣದ ಸ್ವಾಸ್ತ್ಯವನ್ನು ಕಾಣಿಕೆಯಾದ ಪರಿಶುದ್ಧ ಭಾಗಕ್ಕೆ ಎದುರಾಗಿ ಐದು ಸಾವಿರ ಮೊಳ ಅಗಲವಾಗಿಯೂ ಇಪ್ಪತ್ತೈದು ಸಾವಿರ ಮೊಳ ಉದ್ದವಾಗಿಯೂ ನೇಮಿಸಬೇಕು, ಇದು ಸಮಸ್ತ ಇಸ್ರಾಯೇಲಿನ ಮನೆತನದವರಿಗೋಸ್ಕರ ಇರುವದು.

7ಕಾಣಿಕೆಯಾದ ಪರಿಶುದ್ಧ ಭಾಗಕ್ಕೂ ನಗರದ ಸ್ವಾಸ್ತ್ಯಕ್ಕೂ ಈ ಕಡೆಯಲ್ಲಿಯೂ ಆ ಕಡೆಯಲ್ಲಿಯೂ ಕಾಣಿಕೆಯಾದ ಪರಿಶುದ್ಧ ಭಾಗದ ಮುಂದೆಯೂ ಪಟ್ಟಣದ ಸ್ವಾಸ್ತ್ಯದ ಮುಂದೆಯೂ ಅದರ ಪಶ್ಚಿಮದ ಕಡೆಯಲ್ಲಿ ಪಶ್ಚಿಮಕ್ಕೂ ಅದರ ಪೂರ್ವದ ಕಡೆಯಲ್ಲಿ ಪೂರ್ವಕ್ಕೂ ಪ್ರಭುವಿಗೆ ಪಾಲು ಇರಬೇಕು; ಅದರ ಉದ್ದವು ಭಾಗಗಳಲ್ಲಿ ಒಂದಕ್ಕೆ ಎದುರಾಗಿ, ಪಶ್ಚಿಮ ಮೇರೆ ಮೊದಲುಗೊಂಡು ಪೂರ್ವ ಮೇರೆಯ ತನಕ ಇರಬೇಕು.

8ಈ ಭೂಮಿಯು ಅವನಿಗೆ ಇಸ್ರಾಯೇಲಿನಲ್ಲಿ ಸ್ವಾಸ್ತ್ಯವಾಗಿರುವದು; ಆಗ ನನ್ನ ಪ್ರಭುಗಳು ನನ್ನ ಜನರನ್ನು ಉಪದ್ರವಪಡಿಸು ವದೇ ಇಲ್ಲ; ಉಳಿದ ಭೂಮಿಯನ್ನು ಇಸ್ರಾಯೇಲಿನ ಮನೆತನದವರಿಗೆ ಅವರ ಗೋತ್ರಗಳ ಅನುಸಾರವಾಗಿ ಕೊಡಲ್ಪಡುವದು.

9ದೇವರಾದ ಕರ್ತನು ಹೀಗೆ ಹೇಳುತ್ತಾನೆ--ಓ ಇಸ್ರಾಯೇಲಿನ ಪ್ರಭುಗಳೇ, ನೀವು ಸಾಕುಮಾಡಿರಿ, ಬಲಾತ್ಕಾರವನ್ನು ಸುಲಿಗೆಯನ್ನು ಬಿಡಿರಿ; ನ್ಯಾಯವನ್ನೂ ನೀತಿಯನ್ನೂ ಮಾಡಿರಿ; ನನ್ನ ಜನರನ್ನು ಓಡಿಸಬೇಡಿರಿ ಎಂದು ದೇವರಾದ ಕರ್ತನು ಹೇಳುತ್ತಾನೆ.

10ನ್ಯಾಯ ವಾದ ತ್ರಾಸೂ ನ್ಯಾಯವಾದ ಏಫವೂ ನ್ಯಾಯವಾದ ಬತ್‌ (ಅಳತೆ) ನಿಮಗಿರಬೇಕು.

ಯೆಹೆಜ್ಕೇಲನು 45 ಸಂಪೂರ್ಣವಾಗಿ ಓದಿ

ಈ ವಚನವನ್ನು ಇತರ ಭಾಷೆಗಳಲ್ಲಿಯೂ ಓದಿ

KJV தமிழ் తెలుగు हिन्दी