ಯೆಶಾಯ 51:3

ಕರ್ತನು ಚೀಯೋನನ್ನು ಆದರಿಸುವನು; ಆತನು ಅದರ ಹಾಳಾದ ಸ್ಥಳಗ ಳನ್ನು ಸುಧಾರಿಸುವನು; ಅದರ ಅರಣ್ಯವನ್ನು ಏದೆನ್‌ ಹಾಗೆಯೂ ಮರುಭೂಮಿಯನ್ನು ಕರ್ತನ ತೋಟದ ಹಾಗೆಯೂ ಮಾಡುವನು. ಅಲ್ಲಿ ಆನಂದವೂ ಉಲ್ಲಾ ಸವೂ ಉಪಕಾರ ಸ್ತುತಿಯೂ ಇಂಪಾದ ಸ್ವರವೂ ಕಂಡುಬರುವವು.

ಸಂದರ್ಭದೊಂದಿಗೆ ಓದಿ · ಯೆಶಾಯ 51

1ನೀತಿಯನ್ನು ಹಿಂಬಾಲಿಸುವವರೇ, ಕರ್ತನನ್ನು ಹುಡುಕುವವರೇ, ನನ್ನ ಕಡೆಗೆ ಕಿವಿ ಗೊಡಿರಿ; ನೀವು ಯಾವ ಬಂಡೆಯೊಳಗಿಂದ ಕಡಿಯ ಲ್ಪಟ್ಟಿರೋ ಮತ್ತು ಯಾವ ಗುಂಡಿಯೊಳಗಿಂದ ಅಗೆಯ ಲ್ಪಟ್ಟಿರೋ ಆ ಕಡೆಗೆ ನೋಡಿರಿ.

2ನಿಮ್ಮ ತಂದೆಯಾದ ಅಬ್ರಹಾಮನನ್ನು ಮತ್ತು ನಿಮ್ಮನ್ನು ಹೆತ್ತ ಸಾರಳನ್ನು ದೃಷ್ಟಿಸಿರಿ; ನಾನು ಅವನೊಬ್ಬನನ್ನೇ ಕರೆದು ಆಶೀರ್ವ ದಿಸಿ ವೃದ್ಧಿಗೊಳಿಸಿದೆನು.

3ಕರ್ತನು ಚೀಯೋನನ್ನು ಆದರಿಸುವನು; ಆತನು ಅದರ ಹಾಳಾದ ಸ್ಥಳಗ ಳನ್ನು ಸುಧಾರಿಸುವನು; ಅದರ ಅರಣ್ಯವನ್ನು ಏದೆನ್‌ ಹಾಗೆಯೂ ಮರುಭೂಮಿಯನ್ನು ಕರ್ತನ ತೋಟದ ಹಾಗೆಯೂ ಮಾಡುವನು. ಅಲ್ಲಿ ಆನಂದವೂ ಉಲ್ಲಾ ಸವೂ ಉಪಕಾರ ಸ್ತುತಿಯೂ ಇಂಪಾದ ಸ್ವರವೂ ಕಂಡುಬರುವವು.

4ನನ್ನ ಜನರೇ, ಕೇಳಿರಿ; ನನ್ನ ಜನಾಂಗವೇ, ನನ್ನ ಕಡೆಗೆ ಕಿವಿಗೊಡಿರಿ; ನ್ಯಾಯಪ್ರಮಾಣವು ನನ್ನಿಂದ ಹೊರಡುವದು ಮತ್ತು ನನ್ನ ನ್ಯಾಯವನ್ನು ಜನರಿಗೆ ಬೆಳಕನ್ನಾಗಿ ಮಾಡುವೆನು.

5ನನ್ನ ನೀತಿಯು ಸವಿಾಪಿ ಸಿತು; ನನ್ನ ರಕ್ಷಣೆಯು ಹೊರಟಿತು ಮತ್ತು ನನ್ನ ತೋಳುಗಳು ಜನರಿಗೆ ನ್ಯಾಯವನ್ನು ತೀರಿಸುವವು; ದ್ವೀಪಗಳವರು ನನ್ನ ತೋಳಿನ ಮೇಲೆ ಭರವಸವಿಟ್ಟು ನನಗೋಸ್ಕರ ಕಾದುಕೊಂಡಿರುತ್ತಾರೆ.

ಯೆಶಾಯ 51 ಸಂಪೂರ್ಣವಾಗಿ ಓದಿ

ಈ ವಚನವನ್ನು ಇತರ ಭಾಷೆಗಳಲ್ಲಿಯೂ ಓದಿ

KJV தமிழ் తెలుగు हिन्दी