ಯೆಶಾಯ 51:4

ನನ್ನ ಜನರೇ, ಕೇಳಿರಿ; ನನ್ನ ಜನಾಂಗವೇ, ನನ್ನ ಕಡೆಗೆ ಕಿವಿಗೊಡಿರಿ; ನ್ಯಾಯಪ್ರಮಾಣವು ನನ್ನಿಂದ ಹೊರಡುವದು ಮತ್ತು ನನ್ನ ನ್ಯಾಯವನ್ನು ಜನರಿಗೆ ಬೆಳಕನ್ನಾಗಿ ಮಾಡುವೆನು.

ಸಂದರ್ಭದೊಂದಿಗೆ ಓದಿ · ಯೆಶಾಯ 51

2ನಿಮ್ಮ ತಂದೆಯಾದ ಅಬ್ರಹಾಮನನ್ನು ಮತ್ತು ನಿಮ್ಮನ್ನು ಹೆತ್ತ ಸಾರಳನ್ನು ದೃಷ್ಟಿಸಿರಿ; ನಾನು ಅವನೊಬ್ಬನನ್ನೇ ಕರೆದು ಆಶೀರ್ವ ದಿಸಿ ವೃದ್ಧಿಗೊಳಿಸಿದೆನು.

3ಕರ್ತನು ಚೀಯೋನನ್ನು ಆದರಿಸುವನು; ಆತನು ಅದರ ಹಾಳಾದ ಸ್ಥಳಗ ಳನ್ನು ಸುಧಾರಿಸುವನು; ಅದರ ಅರಣ್ಯವನ್ನು ಏದೆನ್‌ ಹಾಗೆಯೂ ಮರುಭೂಮಿಯನ್ನು ಕರ್ತನ ತೋಟದ ಹಾಗೆಯೂ ಮಾಡುವನು. ಅಲ್ಲಿ ಆನಂದವೂ ಉಲ್ಲಾ ಸವೂ ಉಪಕಾರ ಸ್ತುತಿಯೂ ಇಂಪಾದ ಸ್ವರವೂ ಕಂಡುಬರುವವು.

4ನನ್ನ ಜನರೇ, ಕೇಳಿರಿ; ನನ್ನ ಜನಾಂಗವೇ, ನನ್ನ ಕಡೆಗೆ ಕಿವಿಗೊಡಿರಿ; ನ್ಯಾಯಪ್ರಮಾಣವು ನನ್ನಿಂದ ಹೊರಡುವದು ಮತ್ತು ನನ್ನ ನ್ಯಾಯವನ್ನು ಜನರಿಗೆ ಬೆಳಕನ್ನಾಗಿ ಮಾಡುವೆನು.

5ನನ್ನ ನೀತಿಯು ಸವಿಾಪಿ ಸಿತು; ನನ್ನ ರಕ್ಷಣೆಯು ಹೊರಟಿತು ಮತ್ತು ನನ್ನ ತೋಳುಗಳು ಜನರಿಗೆ ನ್ಯಾಯವನ್ನು ತೀರಿಸುವವು; ದ್ವೀಪಗಳವರು ನನ್ನ ತೋಳಿನ ಮೇಲೆ ಭರವಸವಿಟ್ಟು ನನಗೋಸ್ಕರ ಕಾದುಕೊಂಡಿರುತ್ತಾರೆ.

6ಆಕಾಶಗಳ ಕಡೆಗೆ ನಿಮ್ಮ ಕಣ್ಣುಗಳನ್ನು ಎತ್ತಿರಿ ಮತ್ತು ಕೆಳಗಿರುವ ಭೂಮಿಯನ್ನು ನೋಡಿರಿ. ಯಾಕಂದರೆ ಆಕಾಶಗಳು ಹೊಗೆಯಂತೆ ಅಗೋಚರವಾಗುವವು, ಭೂಮಿಯು ಹಳೆಯ ಬಟ್ಟೆಯಂತಾಗುವದು. ಅದರಲ್ಲಿ ವಾಸಿಸುವ ವರು ಅದೇ ರೀತಿಯಲ್ಲಿ ಸಾಯುವರು. ಆದರೆ ನನ್ನ ರಕ್ಷಣೆಯು ಶಾಶ್ವತವಾಗಿರುವದು ಮತ್ತು ನನ್ನ ನೀತಿಯು ಎಂದಿಗೂ ರದ್ದಾಗದು.

ಯೆಶಾಯ 51 ಸಂಪೂರ್ಣವಾಗಿ ಓದಿ

ಈ ವಚನವನ್ನು ಇತರ ಭಾಷೆಗಳಲ್ಲಿಯೂ ಓದಿ

KJV தமிழ் తెలుగు हिन्दी