ಯಾಜಕಕಾಂಡ 27:30

ಭೂಮಿಯ ಬೀಜದಲ್ಲಾಗಲಿ ಮರದ ಫಲದ ಲ್ಲಾಗಲಿ ಹತ್ತನೇ ಪಾಲೆಲ್ಲಾ ಕರ್ತನದೇ. ಅದು ಕರ್ತನಿಗೆ ಪರಿಶುದ್ಧವಾದದ್ದು.

ಸಂದರ್ಭದೊಂದಿಗೆ ಓದಿ · ಯಾಜಕಕಾಂಡ 27

28ಆದಾಗ್ಯೂ ಪ್ರತ್ಯೇಕಿಸಲ್ಪಟ್ಟ ಯಾವದಾದರೂ ಅಂದರೆ ಮನುಷ್ಯನನ್ನಾಗಲಿ ಪಶುವನ್ನಾಗಲಿ ತನ್ನ ಸ್ವಾಸ್ತ್ಯದ ಹೊಲವನ್ನಾಗಲಿ ತನಗಿದ್ದದ್ದನ್ನೆಲ್ಲಾ ಒಬ್ಬ ಮನುಷ್ಯನು ಕರ್ತನಿಗಾಗಿ ಪ್ರತ್ಯೇಕಿಸಿದರೆ ಅದನ್ನು ಮಾರಬಾರದು ಇಲ್ಲವೆ ವಿಮೋಚಿಸಬಾರದು; ಪ್ರತ್ಯೇಕಿ ಸಲ್ಪಟ್ಟ ಪ್ರತಿಯೊಂದು ಕರ್ತನಿಗೆ ಅತೀ ಪರಿಶುದ್ಧ ವಾದದ್ದೇ.

29ಮನುಷ್ಯರಲ್ಲಿ ಪ್ರತ್ಯೇಕಿಸಲ್ಪಟ್ಟವನು ಯಾವನಾದರು ಪ್ರತ್ಯೇಕಿಸಲ್ಪಡದೆ ಹೋದರೆ ಅವನನ್ನು (ಕ್ರಯಕೊಟ್ಟು) ವಿಮೋಚಿಸಬಾರದು. ಖಂಡಿತವಾಗಿ ಅವನನ್ನು ಕೊಲ್ಲಬೇಕು.

30ಭೂಮಿಯ ಬೀಜದಲ್ಲಾಗಲಿ ಮರದ ಫಲದ ಲ್ಲಾಗಲಿ ಹತ್ತನೇ ಪಾಲೆಲ್ಲಾ ಕರ್ತನದೇ. ಅದು ಕರ್ತನಿಗೆ ಪರಿಶುದ್ಧವಾದದ್ದು.

31ಯಾವನಾದರೂ ತನ್ನ ಹತ್ತನೇ ಪಾಲುಗಳನ್ನು ವಿಮೋಚಿಸಬೇಕೆಂದಿದ್ದರೆ ಅದಕ್ಕಿಂತ ಹೆಚ್ಚಾಗಿ ಅದರ ಐದನೇ ಪಾಲನ್ನು ಕೊಡಬೇಕು.

32ಇದಲ್ಲದೆ ದನಕುರಿಗಳಲ್ಲಿಯೂ ಕೋಲಿನ ಕೆಳಗೆ ದಾಟುವ ಎಲ್ಲಾದರಲ್ಲಿಯೂ ಹತ್ತರಲ್ಲಿ ಒಂದು ಭಾಗ ಕರ್ತನಿಗೆ ಪರಿಶುದ್ಧವಾಗಿರುವದು.

ಯಾಜಕಕಾಂಡ 27 ಸಂಪೂರ್ಣವಾಗಿ ಓದಿ

ಈ ವಚನವನ್ನು ಇತರ ಭಾಷೆಗಳಲ್ಲಿಯೂ ಓದಿ

KJV தமிழ் తెలుగు हिन्दी