ಯಾಜಕಕಾಂಡ 27:31

ಯಾವನಾದರೂ ತನ್ನ ಹತ್ತನೇ ಪಾಲುಗಳನ್ನು ವಿಮೋಚಿಸಬೇಕೆಂದಿದ್ದರೆ ಅದಕ್ಕಿಂತ ಹೆಚ್ಚಾಗಿ ಅದರ ಐದನೇ ಪಾಲನ್ನು ಕೊಡಬೇಕು.

ಸಂದರ್ಭದೊಂದಿಗೆ ಓದಿ · ಯಾಜಕಕಾಂಡ 27

29ಮನುಷ್ಯರಲ್ಲಿ ಪ್ರತ್ಯೇಕಿಸಲ್ಪಟ್ಟವನು ಯಾವನಾದರು ಪ್ರತ್ಯೇಕಿಸಲ್ಪಡದೆ ಹೋದರೆ ಅವನನ್ನು (ಕ್ರಯಕೊಟ್ಟು) ವಿಮೋಚಿಸಬಾರದು. ಖಂಡಿತವಾಗಿ ಅವನನ್ನು ಕೊಲ್ಲಬೇಕು.

30ಭೂಮಿಯ ಬೀಜದಲ್ಲಾಗಲಿ ಮರದ ಫಲದ ಲ್ಲಾಗಲಿ ಹತ್ತನೇ ಪಾಲೆಲ್ಲಾ ಕರ್ತನದೇ. ಅದು ಕರ್ತನಿಗೆ ಪರಿಶುದ್ಧವಾದದ್ದು.

31ಯಾವನಾದರೂ ತನ್ನ ಹತ್ತನೇ ಪಾಲುಗಳನ್ನು ವಿಮೋಚಿಸಬೇಕೆಂದಿದ್ದರೆ ಅದಕ್ಕಿಂತ ಹೆಚ್ಚಾಗಿ ಅದರ ಐದನೇ ಪಾಲನ್ನು ಕೊಡಬೇಕು.

32ಇದಲ್ಲದೆ ದನಕುರಿಗಳಲ್ಲಿಯೂ ಕೋಲಿನ ಕೆಳಗೆ ದಾಟುವ ಎಲ್ಲಾದರಲ್ಲಿಯೂ ಹತ್ತರಲ್ಲಿ ಒಂದು ಭಾಗ ಕರ್ತನಿಗೆ ಪರಿಶುದ್ಧವಾಗಿರುವದು.

33ಅದು ಒಳ್ಳೆ ಯದೋ ಕೆಟ್ಟದ್ದೋ ಎಂದು ಅವನು ವಿಚಾರಿಸ ಬಾರದು, ಅದನ್ನು ಬದಲು ಮಾಡಬಾರದು. ಹೇಗಾ ದರೂ ಅದನ್ನು ಬದಲು ಮಾಡಿದರೆ ಅದೂ ಬದಲು ಮಾಡಿದ್ದೂ ಪರಿಶುದ್ಧವಾಗಿರಬೇಕು. ಅದನ್ನು ವಿಮೋಚಿಸಬಾರದು.

ಯಾಜಕಕಾಂಡ 27 ಸಂಪೂರ್ಣವಾಗಿ ಓದಿ

ಈ ವಚನವನ್ನು ಇತರ ಭಾಷೆಗಳಲ್ಲಿಯೂ ಓದಿ

KJV தமிழ் తెలుగు हिन्दी