ಧರ್ಮೋಪದೇಶಕಾಂಡ 20:6

ದ್ರಾಕ್ಷೇತೋಟವನ್ನು ನೆಟ್ಟು ಅದರ ಫಲ ವನ್ನು ತಿನ್ನದೆ ಇರುವ ಮನುಷ್ಯನು ಯುದ್ಧದಲ್ಲಿ ಸಾಯಲಾಗಿ ಮತ್ತೊಬ್ಬನು ಅದರ ಫಲ ತಿನ್ನದಹಾಗೆ ಅವನು ಸಹ ತಿರುಗಿಕೊಂಡು ತನ್ನ ಮನೆಗೆ ಹೋಗಲಿ.

ಸಂದರ್ಭದೊಂದಿಗೆ ಓದಿ · ಧರ್ಮೋಪದೇಶಕಾಂಡ 20

4ಯಾಕಂದರೆ ನಿಮ್ಮ ಶತ್ರುಗಳ ವಿರೋಧವಾಗಿ ನಿಮಗೋಸ್ಕರ ಯುದ್ಧಮಾಡಿ ನಿಮ್ಮನ್ನು ರಕ್ಷಿಸುವದಕ್ಕೆ ನಿಮ್ಮ ದೇವರಾದ ಕರ್ತನೇ ನಿಮ್ಮ ಸಂಗಡ ಹೋಗುತ್ತಾನೆ ಎಂದು ಹೇಳಬೇಕು.

5ಆಗ ಅಧಿಕಾರಿಗಳು ಜನಕ್ಕೆ--ಹೊಸ ಮನೆಯನ್ನು ಕಟ್ಟಿ ಗೃಹಪ್ರತಿಷ್ಠೆಮಾಡದ ಮನುಷ್ಯನು ಯುದ್ಧದಲ್ಲಿ ಸಾಯಲಾಗಿ ಮತ್ತೊಬ್ಬನು ಗೃಹಪ್ರತಿಷ್ಠೆಮಾಡದ ಹಾಗೆ ಅವನು ತಿರುಗಿಕೊಂಡು ತನ್ನ ಮನೆಗೆ ಹೋಗಲಿ.

6ದ್ರಾಕ್ಷೇತೋಟವನ್ನು ನೆಟ್ಟು ಅದರ ಫಲ ವನ್ನು ತಿನ್ನದೆ ಇರುವ ಮನುಷ್ಯನು ಯುದ್ಧದಲ್ಲಿ ಸಾಯಲಾಗಿ ಮತ್ತೊಬ್ಬನು ಅದರ ಫಲ ತಿನ್ನದಹಾಗೆ ಅವನು ಸಹ ತಿರುಗಿಕೊಂಡು ತನ್ನ ಮನೆಗೆ ಹೋಗಲಿ.

7ಹೆಂಡತಿ ಯನ್ನು ನಿಶ್ಚಯಿಸಿಕೊಂಡು ಆಕೆಯನ್ನು ಮದುವೆ ಮಾಡಿಕೊಳ್ಳದ ಮನುಷ್ಯನು ಹಿಂತಿರುಗಿ ಮನೆಗೆ ಹೋಗಲಿ ಯುದ್ಧದಲ್ಲಿ ಸಾಯಲಾಗಿ ಮತ್ತೊಬ್ಬನು ಅವಳನ್ನು ಸೇರಿಸಿಕೊಂಡಾನು ಎಂದು ಹೇಳಬೇಕು.

8ಇದಲ್ಲದೆ ಅಧಿಕಾರಿಗಳು ಜನಕ್ಕೆ ಮತ್ತೆ--ಭಯಸ್ತನಾಗಿ ಬಳಲಿಹೋದ ಹೃದಯವುಳ್ಳ ಮನುಷ್ಯನು ಯಾವನು? ತನ್ನ ಹೃದಯದಂತೆ ತನ್ನ ಸಹೋದರರ ಹೃದಯವು ಬಳಲಿಹೋಗದ ಹಾಗೆ ಅವನು ತಿರುಗಿಕೊಂಡು ತನ್ನ ಮನೆಗೆ ಹೋಗಲಿ ಎಂದು ಹೇಳಬೇಕು.

ಧರ್ಮೋಪದೇಶಕಾಂಡ 20 ಸಂಪೂರ್ಣವಾಗಿ ಓದಿ

ಈ ವಚನವನ್ನು ಇತರ ಭಾಷೆಗಳಲ್ಲಿಯೂ ಓದಿ

KJV தமிழ் తెలుగు हिन्दी