ಯೆರೆಮಿಯ 12:11

ಅದನ್ನು ಹಾಳು ಮಾಡಿದ್ದಾರೆ; ಅದು ಹಾಳಾ ಗಿಯೇ ನನ್ನ ಕಡೆಗೆ ದುಃಖಿಸುತ್ತದೆ, ದೇಶವೆಲ್ಲಾ ಹಾಳಾ ಯಿತು. ಆದಾಗ್ಯೂ ಒಬ್ಬನಾದರೂ ಅದನ್ನು ಮನಸ್ಸಿಗೆ ತರುವದಿಲ್ಲ.

ಸಂದರ್ಭದೊಂದಿಗೆ ಓದಿ · ಯೆರೆಮಿಯ 12

9ನನ್ನ ಸ್ವಾಸ್ತ್ಯವು ನನಗೆ ಚಿತ್ರ ವರ್ಣದ ಪಕ್ಷಿಯಾಯಿತು. ಸುತ್ತಲಾಗಿ ಪಕ್ಷಿಗಳು ಅದಕ್ಕೆ ವಿರೋಧವಾಗಿವೆ; ಬನ್ನಿ, ಹೊಲದ ಮೃಗಗಳ ನ್ನೆಲ್ಲಾ ಕೂಡಿಸಿರಿ, ತಿನ್ನುವದಕ್ಕೆ ಅವುಗಳನ್ನು ತನ್ನಿರಿ;

10ಅನೇಕ ಕುರುಬರು ನನ್ನ ದ್ರಾಕ್ಷೇ ತೋಟವನ್ನು ಕೆಡಿಸಿದ್ದಾರೆ, ನನ್ನ ಭಾಗವನ್ನು ತುಳಿದುಬಿಟ್ಟಿದ್ದಾರೆ, ನಾನು ಮೆಚ್ಚಿದ ಭಾಗವನ್ನು ಹಾಳಾದ ಅರಣ್ಯವಾಗ ಮಾಡಿದ್ದಾರೆ.

11ಅದನ್ನು ಹಾಳು ಮಾಡಿದ್ದಾರೆ; ಅದು ಹಾಳಾ ಗಿಯೇ ನನ್ನ ಕಡೆಗೆ ದುಃಖಿಸುತ್ತದೆ, ದೇಶವೆಲ್ಲಾ ಹಾಳಾ ಯಿತು. ಆದಾಗ್ಯೂ ಒಬ್ಬನಾದರೂ ಅದನ್ನು ಮನಸ್ಸಿಗೆ ತರುವದಿಲ್ಲ.

12ಅರಣ್ಯದಲ್ಲಿರುವ ಎಲ್ಲಾ ಉನ್ನತ ಸ್ಥಳಗಳ ಮೇಲೆ ಕೆಡಿಸುವವರು ಬಂದಿದ್ದಾರೆ; ಕರ್ತನ ಕತ್ತಿಯು ದೇಶದ ಒಂದು ಕಡೆಯಿಂದ ಇನ್ನೊಂದು ಕಡೆಯ ವರೆಗೂ ತಿಂದು ಬಿಡುತ್ತದೆ ಯಾವ ಮನುಷ್ಯನಿಗೂ ಸಮಾಧಾನವಿಲ್ಲ.

13ಗೋಧಿಯನ್ನು ಬಿತ್ತಿ, ಮುಳ್ಳು ಗಳನ್ನು ಕೊಯ್ಯುವರು; ಕಷ್ಟಪಟ್ಟರೂ ಪ್ರಯೋಜನ ವಾಗುವದಿಲ್ಲ; ಕರ್ತನ ಕೋಪದ ಉರಿಯಿಂದ ನಿಮ್ಮ ಬೆಳೆಯ ವಿಷಯವಾಗಿ ನಾಚಿಕೆಪಡುವಿರಿ.

ಯೆರೆಮಿಯ 12 ಸಂಪೂರ್ಣವಾಗಿ ಓದಿ

ಈ ವಚನವನ್ನು ಇತರ ಭಾಷೆಗಳಲ್ಲಿಯೂ ಓದಿ

KJV தமிழ் తెలుగు हिन्दी