ಯೆರೆಮಿಯ 12:12

ಅರಣ್ಯದಲ್ಲಿರುವ ಎಲ್ಲಾ ಉನ್ನತ ಸ್ಥಳಗಳ ಮೇಲೆ ಕೆಡಿಸುವವರು ಬಂದಿದ್ದಾರೆ; ಕರ್ತನ ಕತ್ತಿಯು ದೇಶದ ಒಂದು ಕಡೆಯಿಂದ ಇನ್ನೊಂದು ಕಡೆಯ ವರೆಗೂ ತಿಂದು ಬಿಡುತ್ತದೆ ಯಾವ ಮನುಷ್ಯನಿಗೂ ಸಮಾಧಾನವಿಲ್ಲ.

ಸಂದರ್ಭದೊಂದಿಗೆ ಓದಿ · ಯೆರೆಮಿಯ 12

10ಅನೇಕ ಕುರುಬರು ನನ್ನ ದ್ರಾಕ್ಷೇ ತೋಟವನ್ನು ಕೆಡಿಸಿದ್ದಾರೆ, ನನ್ನ ಭಾಗವನ್ನು ತುಳಿದುಬಿಟ್ಟಿದ್ದಾರೆ, ನಾನು ಮೆಚ್ಚಿದ ಭಾಗವನ್ನು ಹಾಳಾದ ಅರಣ್ಯವಾಗ ಮಾಡಿದ್ದಾರೆ.

11ಅದನ್ನು ಹಾಳು ಮಾಡಿದ್ದಾರೆ; ಅದು ಹಾಳಾ ಗಿಯೇ ನನ್ನ ಕಡೆಗೆ ದುಃಖಿಸುತ್ತದೆ, ದೇಶವೆಲ್ಲಾ ಹಾಳಾ ಯಿತು. ಆದಾಗ್ಯೂ ಒಬ್ಬನಾದರೂ ಅದನ್ನು ಮನಸ್ಸಿಗೆ ತರುವದಿಲ್ಲ.

12ಅರಣ್ಯದಲ್ಲಿರುವ ಎಲ್ಲಾ ಉನ್ನತ ಸ್ಥಳಗಳ ಮೇಲೆ ಕೆಡಿಸುವವರು ಬಂದಿದ್ದಾರೆ; ಕರ್ತನ ಕತ್ತಿಯು ದೇಶದ ಒಂದು ಕಡೆಯಿಂದ ಇನ್ನೊಂದು ಕಡೆಯ ವರೆಗೂ ತಿಂದು ಬಿಡುತ್ತದೆ ಯಾವ ಮನುಷ್ಯನಿಗೂ ಸಮಾಧಾನವಿಲ್ಲ.

13ಗೋಧಿಯನ್ನು ಬಿತ್ತಿ, ಮುಳ್ಳು ಗಳನ್ನು ಕೊಯ್ಯುವರು; ಕಷ್ಟಪಟ್ಟರೂ ಪ್ರಯೋಜನ ವಾಗುವದಿಲ್ಲ; ಕರ್ತನ ಕೋಪದ ಉರಿಯಿಂದ ನಿಮ್ಮ ಬೆಳೆಯ ವಿಷಯವಾಗಿ ನಾಚಿಕೆಪಡುವಿರಿ.

14ನನ್ನ ಕೆಟ್ಟ ನೆರೆಯವರೆಲ್ಲರಿಗೆ ನನ್ನ ಜನರಾದ ಇಸ್ರಾಯೇಲ್ಯರಿಗೆ ಸ್ವಾಧೀನಮಾಡಿಕೊಳ್ಳುವದಕ್ಕೆ ನಾನು ಕೊಟ್ಟ ಸ್ವಾಸ್ತ್ಯವನ್ನು ಮುಟ್ಟುವವರಿಗೆ ಕರ್ತನು ಹೀಗೆ ಹೇಳುತ್ತಾನೆ--ಇಗೋ, ನಾನು ಅವರನ್ನು ಅವರ ಭೂಮಿಯೊಳಗಿಂದ ಕಿತ್ತುಹಾಕುವೆನು; ಯೆಹೂದನ ಮನೆತನದವರನ್ನು ಅವರೊಳಗಿಂದ ಕಿತ್ತುಹಾಕುವೆನು.

ಯೆರೆಮಿಯ 12 ಸಂಪೂರ್ಣವಾಗಿ ಓದಿ

ಈ ವಚನವನ್ನು ಇತರ ಭಾಷೆಗಳಲ್ಲಿಯೂ ಓದಿ

KJV தமிழ் తెలుగు हिन्दी