೧ ಪೂರ್ವಕಾಲವೃತ್ತಾಂತ 22:9

ಇಗೋ, ಸಮಾ ಧಾನವುಳ್ಳ ಮನುಷ್ಯನಾಗಿರುವ ಒಬ್ಬ ಮಗನು ನಿನಗೆ ಹುಟ್ಟುವನು; ಸುತ್ತಲಿರುವ ಅವನ ಸಮಸ್ತ ಶತ್ರುಗಳಿಂದ ನಾನು ಅವನಿಗೆ ಸಮಾಧಾನವನ್ನು ಕೊಡುವೆನು. ಅವ ನಿಗೆ ಸೊಲೊಮೋನನೆಂಬ ಹೆಸರಾಗುವದು; ಅವನ ದಿವಸಗಳಲ್ಲಿ ನಾನು ಇಸ್ರಾಯೇಲಿಗೆ ಸಮಾಧಾನ ವನ್ನೂ ವಿಶ್ರಾಂತಿಯನ್ನೂ ಕೊಡುವೆನು.

ಸಂದರ್ಭದೊಂದಿಗೆ ಓದಿ · ೧ ಪೂರ್ವಕಾಲವೃತ್ತಾಂತ 22

7ದಾವೀ ದನು ಹೇಳಿದ್ದೇನಂದರೆ--ನನ್ನ ಮಗನೇ, ನಾನು ನನ್ನ ದೇವರಾದ ಕರ್ತನ ನಾಮಕ್ಕೆ ಮನೆಯನ್ನು ಕಟ್ಟಿಸ ಬೇಕೆಂಬದು ನನ್ನ ಹೃದಯದಲ್ಲಿ ಇತ್ತು.

8ಆದರೆ ಕರ್ತ ನಿಂದ ನನಗುಂಟಾದ ವಾಕ್ಯವೇನಂದರೆ--ನೀನು ಬಹು ರಕ್ತವನ್ನು ಚೆಲ್ಲಿದ್ದೀ; ಮಹಾಯುದ್ಧಗಳನ್ನು ಮಾಡಿದ್ದೀ; ನೀನು ನನ್ನ ಹೆಸರಿಗೆ ಮನೆಯನ್ನು ಕಟ್ಟಿಸಬೇಡ; ಯಾಕಂದರೆ ನೀನು ನನ್ನ ಸಮ್ಮುಖದಲ್ಲಿ ಭೂಮಿಯ ಮೇಲೆ ಬಹಳ ರಕ್ತವನ್ನು ಸುರಿಸಿದ್ದಿ.

9ಇಗೋ, ಸಮಾ ಧಾನವುಳ್ಳ ಮನುಷ್ಯನಾಗಿರುವ ಒಬ್ಬ ಮಗನು ನಿನಗೆ ಹುಟ್ಟುವನು; ಸುತ್ತಲಿರುವ ಅವನ ಸಮಸ್ತ ಶತ್ರುಗಳಿಂದ ನಾನು ಅವನಿಗೆ ಸಮಾಧಾನವನ್ನು ಕೊಡುವೆನು. ಅವ ನಿಗೆ ಸೊಲೊಮೋನನೆಂಬ ಹೆಸರಾಗುವದು; ಅವನ ದಿವಸಗಳಲ್ಲಿ ನಾನು ಇಸ್ರಾಯೇಲಿಗೆ ಸಮಾಧಾನ ವನ್ನೂ ವಿಶ್ರಾಂತಿಯನ್ನೂ ಕೊಡುವೆನು.

10ಅವನು ನನ್ನ ನಾಮಕ್ಕೆ ಮನೆಯನ್ನು ಕಟ್ಟಿಸುವನು. ಅವನು ನನ್ನ ಮಗನಾಗಿರುವನು, ನಾನು ಅವನಿಗೆ ತಂದೆ ಯಾಗಿರುವೆನು; ಇಸ್ರಾಯೇಲಿನ ಮೇಲೆ ಅವನ ರಾಜ್ಯದ ಸಿಂಹಾಸನವನ್ನು ಯುಗ ಯುಗಾಂತರಕ್ಕೂ ಸ್ಥಿರಪಡಿಸುವೆನು.

11ಈಗ ನನ್ನ ಮಗನೇ, ಕರ್ತನು ನಿನ್ನನ್ನು ಕುರಿತು ಹೇಳಿದ ಪ್ರಕಾರ ನೀನು ಸಫಲವನ್ನು ಹೊಂದುವ ಹಾಗೆಯೂ ನೀನು ನಿನ್ನ ದೇವರಾದ ಕರ್ತನ ಮನೆಯನ್ನು ಕಟ್ಟಿಸುವ ಹಾಗೆಯೂ ಆತನು ನಿನ್ನ ಸಂಗಡ ಇರಲಿ.

೧ ಪೂರ್ವಕಾಲವೃತ್ತಾಂತ 22 ಸಂಪೂರ್ಣವಾಗಿ ಓದಿ

ಈ ವಚನವನ್ನು ಇತರ ಭಾಷೆಗಳಲ್ಲಿಯೂ ಓದಿ

KJV தமிழ் తెలుగు हिन्दी