ಅನ್ಯ ಸ್ತ್ರೀಯ ರನ್ನು ಹೊಂದಿದವರೆಲ್ಲರ ಕಾರ್ಯವನ್ನು ಮೊದಲನೇ ತಿಂಗಳ ಮೊದಲನೇ ದಿವಸದಲ್ಲಿ ಮುಗಿಸಿದರು.
15ಆದರೆ ಅಸಾಹೇಲನ ಮಗನಾದ ಯೋನಾತಾನನೂ ತಿಕ್ವನ ಮಗನಾದ ಯಹ್ಜೆಯನೂ ಇವರೇ ಇದಕ್ಕೆನೇಮಕವಾದರು. ಮೆಷುಲ್ಲಾಮನೂ ಲೇವಿಯನಾದ ಶಬ್ಬೆತೈಯನೂ ಅವರಿಗೆ ಸಹಾಯಕರಾಗಿದ್ದರು.
16ಸೆರೆ ಇರುವಿಕೆಯ ಮಕ್ಕಳು ಇದೇ ಪ್ರಕಾರ ಮಾಡಿದರು; ಆದದರಿಂದ ಯಾಜಕನಾದ ಎಜ್ರನು ತಮ್ಮ ತಂದೆಗಳ ಮನೆಯ ಪ್ರಕಾರ ತಂದೆಗಳಲ್ಲಿ ಪ್ರಮುಖರಾದ ಕೆಲ ವರು ಹೆಸರು ಹೆಸರಾಗಿ ಪ್ರತ್ಯೇಕಿಸಲ್ಪಟ್ಟು, ಈ ಕಾರ್ಯವನ್ನು ಶೋಧಿಸಲು ಹತ್ತನೇ ತಿಂಗಳ ಮೊದ ಲನೇ ದಿವಸದಲ್ಲಿ ಕುಳಿತುಕೊಂಡರು.
17ಅನ್ಯ ಸ್ತ್ರೀಯ ರನ್ನು ಹೊಂದಿದವರೆಲ್ಲರ ಕಾರ್ಯವನ್ನು ಮೊದಲನೇ ತಿಂಗಳ ಮೊದಲನೇ ದಿವಸದಲ್ಲಿ ಮುಗಿಸಿದರು.
18ಯಾಜಕರ ಕುಮಾರರಲ್ಲಿ ಅನ್ಯಸ್ತ್ರೀಯರನ್ನು ತಕ್ಕೊಂಡವರಾಗಿ ಕಾಣಿಸಲ್ಪಟ್ಟವರು ಯಾರಂದರೆ-- ಯೋಚಾದಾಕನ ಮಗನಾದ ಯೇಷೊವನ ಕುಮಾರ ರಲ್ಲಿಯೂ ಅವನ ಸಹೋದರರಲ್ಲಿಯೂ ಮಾಸೇ ಯ, ಎಲಿಯೇಜರ, ಯಾರೀಬ, ಗೆದಲ್ಯ.
19ಇವರು ತಮ್ಮ ಸ್ತ್ರೀಯರನ್ನು ಹೊರಡಿಸಿ ಬಿಡುವೆವೆಂದು ತಮ್ಮ ಕೈಕೊಟ್ಟು ತಾವು ಅಪರಾಧಸ್ತರಾದದರಿಂದ ಅಪರಾಧ ಕಳೆಯುವದಕ್ಕೆ ಮಂದೆಯಿಂದ ತಂದ ಒಂದು ಟಗ ರನ್ನು ಅರ್ಪಿಸಿದರು.
ಈ ವಚನವನ್ನು ಇತರ ಭಾಷೆಗಳಲ್ಲಿಯೂ ಓದಿ