ಎಜ್ರನು 10:16

ಸೆರೆ ಇರುವಿಕೆಯ ಮಕ್ಕಳು ಇದೇ ಪ್ರಕಾರ ಮಾಡಿದರು; ಆದದರಿಂದ ಯಾಜಕನಾದ ಎಜ್ರನು ತಮ್ಮ ತಂದೆಗಳ ಮನೆಯ ಪ್ರಕಾರ ತಂದೆಗಳಲ್ಲಿ ಪ್ರಮುಖರಾದ ಕೆಲ ವರು ಹೆಸರು ಹೆಸರಾಗಿ ಪ್ರತ್ಯೇಕಿಸಲ್ಪಟ್ಟು, ಈ ಕಾರ್ಯವನ್ನು ಶೋಧಿಸಲು ಹತ್ತನೇ ತಿಂಗಳ ಮೊದ ಲನೇ ದಿವಸದಲ್ಲಿ ಕುಳಿತುಕೊಂಡರು.

ಸಂದರ್ಭದೊಂದಿಗೆ ಓದಿ · ಎಜ್ರನು 10

14ಆದಕಾರಣ ದಯಮಾಡಿ--ಸಭೆಯಲ್ಲಾದರಲ್ಲಿ ನಮ್ಮ ಪ್ರಧಾನರು ನಿಲ್ಲಲಿ. ಮತ್ತು ಈ ಕಾರ್ಯದ ನಿಮಿತ್ತ ನಮ್ಮ ದೇವರ ಉರಿಯುವ ಕೋಪವು ನಮ್ಮನ್ನು ಬಿಟ್ಟುಹೋಗುವ ವರೆಗೆ, ನಮ್ಮ ಪಟ್ಟಣಗಳಲ್ಲಿ ಅನ್ಯ ಸ್ತ್ರೀಯರನ್ನು ತಕ್ಕೊಂಡವರು ನೇಮಿಸಿದ ಕಾಲದಲ್ಲಿ ಬಂದು ಅವರ ಸಂಗಡ ಪ್ರತಿ ಪಟ್ಟಣದ ಹಿರಿಯರೂ ಅದರ ನ್ಯಾಯಾಧಿಪತಿಗಳೂ ಇರಲಿ ಅಂದರು.

15ಆದರೆ ಅಸಾಹೇಲನ ಮಗನಾದ ಯೋನಾತಾನನೂ ತಿಕ್ವನ ಮಗನಾದ ಯಹ್ಜೆಯನೂ ಇವರೇ ಇದಕ್ಕೆನೇಮಕವಾದರು. ಮೆಷುಲ್ಲಾಮನೂ ಲೇವಿಯನಾದ ಶಬ್ಬೆತೈಯನೂ ಅವರಿಗೆ ಸಹಾಯಕರಾಗಿದ್ದರು.

16ಸೆರೆ ಇರುವಿಕೆಯ ಮಕ್ಕಳು ಇದೇ ಪ್ರಕಾರ ಮಾಡಿದರು; ಆದದರಿಂದ ಯಾಜಕನಾದ ಎಜ್ರನು ತಮ್ಮ ತಂದೆಗಳ ಮನೆಯ ಪ್ರಕಾರ ತಂದೆಗಳಲ್ಲಿ ಪ್ರಮುಖರಾದ ಕೆಲ ವರು ಹೆಸರು ಹೆಸರಾಗಿ ಪ್ರತ್ಯೇಕಿಸಲ್ಪಟ್ಟು, ಈ ಕಾರ್ಯವನ್ನು ಶೋಧಿಸಲು ಹತ್ತನೇ ತಿಂಗಳ ಮೊದ ಲನೇ ದಿವಸದಲ್ಲಿ ಕುಳಿತುಕೊಂಡರು.

17ಅನ್ಯ ಸ್ತ್ರೀಯ ರನ್ನು ಹೊಂದಿದವರೆಲ್ಲರ ಕಾರ್ಯವನ್ನು ಮೊದಲನೇ ತಿಂಗಳ ಮೊದಲನೇ ದಿವಸದಲ್ಲಿ ಮುಗಿಸಿದರು.

18ಯಾಜಕರ ಕುಮಾರರಲ್ಲಿ ಅನ್ಯಸ್ತ್ರೀಯರನ್ನು ತಕ್ಕೊಂಡವರಾಗಿ ಕಾಣಿಸಲ್ಪಟ್ಟವರು ಯಾರಂದರೆ-- ಯೋಚಾದಾಕನ ಮಗನಾದ ಯೇಷೊವನ ಕುಮಾರ ರಲ್ಲಿಯೂ ಅವನ ಸಹೋದರರಲ್ಲಿಯೂ ಮಾಸೇ ಯ, ಎಲಿಯೇಜರ, ಯಾರೀಬ, ಗೆದಲ್ಯ.

ಎಜ್ರನು 10 ಸಂಪೂರ್ಣವಾಗಿ ಓದಿ

ಈ ವಚನವನ್ನು ಇತರ ಭಾಷೆಗಳಲ್ಲಿಯೂ ಓದಿ

KJV தமிழ் తెలుగు हिन्दी