ಜೆಕರ್ಯ 1:13

ಆಗ ಕರ್ತನು ನನ್ನ ಸಂಗಡ ಮಾತನಾಡಿದ ದೂತನಿಗೆ ಒಳ್ಳೇ ಮಾತುಗಳಿಂದಲೂ ಆದರಣೆಯ ಮಾತು ಗಳಿಂದಲೂ ಉತ್ತರಕೊಟ್ಟನು.

ಸಂದರ್ಭದೊಂದಿಗೆ ಓದಿ · ಜೆಕರ್ಯ 1

11ಆಗ ಅವರು ಗಂಧದ ಗಿಡಗಳ ನಡುವೆ ನಿಂತ ಕರ್ತನ ದೂತನಿಗೆ ಉತ್ತರಕೊಟ್ಟು ಹೇಳಿದ್ದೇನಂದರೆ -- ಭೂಮಿಯಲ್ಲಿ ಇತ್ತಿಂದ ಅತ್ತ ಅತ್ತಿಂದ ಇತ್ತ ನಡೆದಾಡಿದ್ದೇವೆ; ಇಗೋ, ಭೂಮಿಯೆಲ್ಲಾ ಸುಮ್ಮನಿದ್ದು ಶಾಂತಿಯಾಗಿದೆ ಅಂದರು.

12ಆಗ ಕರ್ತನ ದೂತನು ಉತ್ತರಕೊಟ್ಟು ಹೀಗಂ ದನು--ಓ ಸೈನ್ಯಗಳ ಕರ್ತನೇ, ನೀನು ಯೆರೂಸಲೇ ಮನ್ನೂ ಯೆಹೂದದ ಪಟ್ಟಣಗಳನ್ನೂ ಎಷ್ಟರ ವರೆಗೆ ಕನಿಕರಿಸದೆ ಇರುವಿ? ಅವುಗಳ ಮೇಲೆ ಈ ಎಪ್ಪತ್ತು ವರುಷಗಳು ಸಿಟ್ಟು ಮಾಡಿದ್ದೀಯಲ್ಲವೋ ಅಂದನು.

13ಆಗ ಕರ್ತನು ನನ್ನ ಸಂಗಡ ಮಾತನಾಡಿದ ದೂತನಿಗೆ ಒಳ್ಳೇ ಮಾತುಗಳಿಂದಲೂ ಆದರಣೆಯ ಮಾತು ಗಳಿಂದಲೂ ಉತ್ತರಕೊಟ್ಟನು.

14ನನ್ನ ಸಂಗಡ ಮಾತ ನಾಡಿದ ದೂತನು ನನಗೆ ಹೇಳಿದ್ದೇನಂದರೆ--ಕೂಗಿ ಹೇಳು; ಏನಂದರೆ--ಸೈನ್ಯಗಳ ಕರ್ತನು ಹೀಗೆ ಹೇಳು ತ್ತಾನೆ--ನಾನು ಯೆರೂಸಲೇಮಿಗಾಗಿಯೂ ಚೀಯೋನಿ ಗಾಗಿಯೂ ಬಹುರೋಷವುಳ್ಳವನಾಗಿದ್ದೇನೆ.

15ನಿಶ್ಚಿಂತೆ ಯುಳ್ಳವರಾಗಿರುವ ಅನ್ಯಜನಾಂಗದ ಮೇಲೆ ನಾನು ಬಹಳ ಕೋಪಿಸಿಕೊಂಡಿದ್ದೇನೆ. ನಾನು ಸ್ವಲ್ಪ ಕೋಪ ಮಾಡಿಕೊಂಡಾಗ ಅವರು ಸಂಕಟಕ್ಕೆ ಸಹಾಯಮಾಡಿ ದರು.

ಜೆಕರ್ಯ 1 ಸಂಪೂರ್ಣವಾಗಿ ಓದಿ

ಈ ವಚನವನ್ನು ಇತರ ಭಾಷೆಗಳಲ್ಲಿಯೂ ಓದಿ

KJV தமிழ் తెలుగు हिन्दी