ಯೆಹೋಶುವ 6:16

ಏಳನೇ ಸಾರಿ ಯಾಜಕರು ತುತೂರಿಗಳನ್ನು ಊದುವಾಗ ಆದದ್ದೇನಂದರೆ, ಯೆಹೋಶುವನು ಜನರಿಗೆ--ಆರ್ಭಟಿಸಿರಿ; ಕರ್ತನು ನಿಮಗೆ ಈ ಪಟ್ಟಣವನ್ನು ಕೊಟ್ಟಿದ್ದಾನೆ ಅಂದನು.

ಸಂದರ್ಭದೊಂದಿಗೆ ಓದಿ · ಯೆಹೋಶುವ 6

14ಹೀಗೆ ಎರಡನೆ ದಿನದಲ್ಲಿ ಅವರು ಪಟ್ಟಣವನ್ನು ಒಂದು ಸಾರಿ ಸುತ್ತಿ ಬಂದು ಪಾಳೆಯಕ್ಕೆ ಹಿಂತಿರುಗಿದರು. ಹೀಗೆಯೇ ಆರು ದಿವಸ ಮಾಡಿದರು.

15ಆದರೆ ಏಳನೇ ದಿವಸ ಸೂರ್ಯೋದಯವಾಗುವಾಗ ಅವರು ಎದ್ದು ಪಟ್ಟಣವನ್ನು ಅದೇ ರೀತಿಯಾಗಿ ಏಳು ಸಾರಿ ಸುತ್ತಿಬಂದರು; ಆ ದಿನದಲ್ಲಿ ಮಾತ್ರವೇ ಪಟ್ಟಣವನ್ನು ಏಳು ಸಾರಿ ಸುತ್ತಿ ಬಂದರು.

16ಏಳನೇ ಸಾರಿ ಯಾಜಕರು ತುತೂರಿಗಳನ್ನು ಊದುವಾಗ ಆದದ್ದೇನಂದರೆ, ಯೆಹೋಶುವನು ಜನರಿಗೆ--ಆರ್ಭಟಿಸಿರಿ; ಕರ್ತನು ನಿಮಗೆ ಈ ಪಟ್ಟಣವನ್ನು ಕೊಟ್ಟಿದ್ದಾನೆ ಅಂದನು.

17ಇದಲ್ಲದೆ ಈ ಪಟ್ಟಣವೂ ಅದರಲ್ಲಿರುವ ಸಮಸ್ತವೂ ಕರ್ತನ ಶಾಪಕ್ಕೊಳಗಾಗುವದು; ರಾಹಾಬಳೆಂಬ ಸೂಳೆಯೂ ಆಕೆಯ ಮನೆಯಲ್ಲಿ ಇರುವವರೆಲ್ಲರೂ ಮಾತ್ರ ಉಳಿಯಲಿ. ಯಾಕಂದರೆ ನಾವು ಕಳುಹಿಸಿದ ದೂತರನ್ನು ಆಕೆಯು ಬಚ್ಚಿಟ್ಟಳು.

18ನೀವು ಶಾಪ ಕ್ಕೊಳಗಾದವುಗಳನ್ನು ತೆಗೆದುಕೊಂಡಾಗ ನಿಮ್ಮನ್ನು ಶಾಪಕ್ಕೆ ಈಡಾಗಿ ಮಾಡಿಕೊಂಡು ಇಸ್ರಾಯೇಲಿನ ದಂಡನ್ನು ಶಾಪಕ್ಕೆ ಈಡುಮಾಡಿ ತೊಂದರೆಪಡಿಸದ ಹಾಗೆ ಶಾಪಕ್ಕೆ ಈಡಾದವುಗಳನ್ನು ತೆಗೆದುಕೊಳ್ಳದೆ ಬಹು ಎಚ್ಚರಿಕೆಯಾಗಿರ್ರಿ.

ಯೆಹೋಶುವ 6 ಸಂಪೂರ್ಣವಾಗಿ ಓದಿ

ಈ ವಚನವನ್ನು ಇತರ ಭಾಷೆಗಳಲ್ಲಿಯೂ ಓದಿ

KJV தமிழ் తెలుగు हिन्दी