ಯೆಹೋಶುವ 6:18

ನೀವು ಶಾಪ ಕ್ಕೊಳಗಾದವುಗಳನ್ನು ತೆಗೆದುಕೊಂಡಾಗ ನಿಮ್ಮನ್ನು ಶಾಪಕ್ಕೆ ಈಡಾಗಿ ಮಾಡಿಕೊಂಡು ಇಸ್ರಾಯೇಲಿನ ದಂಡನ್ನು ಶಾಪಕ್ಕೆ ಈಡುಮಾಡಿ ತೊಂದರೆಪಡಿಸದ ಹಾಗೆ ಶಾಪಕ್ಕೆ ಈಡಾದವುಗಳನ್ನು ತೆಗೆದುಕೊಳ್ಳದೆ ಬಹು ಎಚ್ಚರಿಕೆಯಾಗಿರ್ರಿ.

ಸಂದರ್ಭದೊಂದಿಗೆ ಓದಿ · ಯೆಹೋಶುವ 6

16ಏಳನೇ ಸಾರಿ ಯಾಜಕರು ತುತೂರಿಗಳನ್ನು ಊದುವಾಗ ಆದದ್ದೇನಂದರೆ, ಯೆಹೋಶುವನು ಜನರಿಗೆ--ಆರ್ಭಟಿಸಿರಿ; ಕರ್ತನು ನಿಮಗೆ ಈ ಪಟ್ಟಣವನ್ನು ಕೊಟ್ಟಿದ್ದಾನೆ ಅಂದನು.

17ಇದಲ್ಲದೆ ಈ ಪಟ್ಟಣವೂ ಅದರಲ್ಲಿರುವ ಸಮಸ್ತವೂ ಕರ್ತನ ಶಾಪಕ್ಕೊಳಗಾಗುವದು; ರಾಹಾಬಳೆಂಬ ಸೂಳೆಯೂ ಆಕೆಯ ಮನೆಯಲ್ಲಿ ಇರುವವರೆಲ್ಲರೂ ಮಾತ್ರ ಉಳಿಯಲಿ. ಯಾಕಂದರೆ ನಾವು ಕಳುಹಿಸಿದ ದೂತರನ್ನು ಆಕೆಯು ಬಚ್ಚಿಟ್ಟಳು.

18ನೀವು ಶಾಪ ಕ್ಕೊಳಗಾದವುಗಳನ್ನು ತೆಗೆದುಕೊಂಡಾಗ ನಿಮ್ಮನ್ನು ಶಾಪಕ್ಕೆ ಈಡಾಗಿ ಮಾಡಿಕೊಂಡು ಇಸ್ರಾಯೇಲಿನ ದಂಡನ್ನು ಶಾಪಕ್ಕೆ ಈಡುಮಾಡಿ ತೊಂದರೆಪಡಿಸದ ಹಾಗೆ ಶಾಪಕ್ಕೆ ಈಡಾದವುಗಳನ್ನು ತೆಗೆದುಕೊಳ್ಳದೆ ಬಹು ಎಚ್ಚರಿಕೆಯಾಗಿರ್ರಿ.

19ಎಲ್ಲಾ ಬೆಳ್ಳಿ ಬಂಗಾರವೂ ಹಿತ್ತಾಳೆ ಕಬ್ಬಿಣ ಪಾತ್ರೆಗಳೂ ಕರ್ತನಿಗೆ ವಿಾಸಲಾಗಿರ ಬೇಕು. ಅವು ಕರ್ತನ ಭಂಡಾರಕ್ಕೆ ಸೇರಬೇಕು ಅಂದನು.

20ಹೀಗೆ ಯಾಜಕರು ತುತೂರಿಗಳನ್ನು ಊದಿದಾಗ ಜನರು ಆರ್ಭಟಿಸಿದರು. ತುತ್ತೂರಿಯ ಶಬ್ದವನ್ನು ಜನರು ಕೇಳಿದಾಗ ಮಹಾ ಆರ್ಭಟವಾಗಿ ಆರ್ಭಟಿಸುತ್ತಲೇ ಗೋಡೆಯು ನೆಲಸಮವಾಗಿ ಕೆಳಗೆ ಬಿತ್ತು; ಹೀಗೆ ಜನರಲ್ಲಿ ಪ್ರತಿಯೊಬ್ಬನು ತನ್ನ ಮುಂದೆ ನೇರವಾಗಿ ಏರಿಹೋದನು. ಆಗ ಪಟ್ಟಣವು ಅವರಿಗೆ ಸ್ವಾಧೀನ ವಾಯಿತು.

ಯೆಹೋಶುವ 6 ಸಂಪೂರ್ಣವಾಗಿ ಓದಿ

ಈ ವಚನವನ್ನು ಇತರ ಭಾಷೆಗಳಲ್ಲಿಯೂ ಓದಿ

KJV தமிழ் తెలుగు हिन्दी