ಯೆರೆಮಿಯ 31:22

ಹಿಂಜರಿದ ಮಗಳೇ, ಎಷ್ಟರ ವರೆಗೆ ಅಲೆದಾಡುವಿ? ಕರ್ತನು ಭೂಮಿಯಲ್ಲಿ ಹೊಸ ದನ್ನು ಸೃಷ್ಟಿಸುತ್ತಾನೆ; ಹೆಂಗಸು ಗಂಡಸನ್ನು ಆವರಿಸಿ ಕೊಳ್ಳುವಳು.

ಸಂದರ್ಭದೊಂದಿಗೆ ಓದಿ · ಯೆರೆಮಿಯ 31

20ಎಫ್ರಾಯಾಮನು ನನಗೆ ಪ್ರಿಯಕುಮಾರನೋ? ಅವನು ಆನಂದವುಳ್ಳ ಮಗುವೋ? ನಾನು ಅವನಿಗೆ ವಿರೋಧವಾಗಿ ಮಾತ ನಾಡಿದಂದಿನಿಂದ ಅವನನ್ನು ಇನ್ನು ಬಹಳವಾಗಿ ಜ್ಞಾಪಕಮಾಡುತ್ತೇನೆ; ಆದದರಿಂದ ನನ್ನ ಕರುಳುಗಳು ಅವನಿಗೋಸ್ಕರ ಕಳವಳಪಡುತ್ತವೆ. ನಾನು ನಿಶ್ಚಯವಾಗಿ ಅವನನ್ನು ಕನಿಕರಿಸುವೆನೆಂದು ಕರ್ತನು ಅನ್ನುತ್ತಾನೆ.

21ನಿನಗೋಸ್ಕರ ದಾರಿಗುರುತುಗಳನ್ನು ನಿಲ್ಲಿಸು; ಎತ್ತರವಾದ ಗುಡ್ಡಗಳನ್ನು ಇರಿಸು; ಹೆದ್ದಾರಿಯ ಕಡೆಗೆ ನೀನು ಹೋದದಾರಿಗೆ ನಿನ್ನ ಹೃದಯವನ್ನು ಇಟ್ಟುಕೋ; ಇಸ್ರಾಯೇಲಿನ ಕನ್ಯಾಸ್ತ್ರೀಯೇ, ತಿರುಗಿಕೋ, ಈ ಪಟ್ಟಣಗಳಿಗೆ ತಿರುಗು.

22ಹಿಂಜರಿದ ಮಗಳೇ, ಎಷ್ಟರ ವರೆಗೆ ಅಲೆದಾಡುವಿ? ಕರ್ತನು ಭೂಮಿಯಲ್ಲಿ ಹೊಸ ದನ್ನು ಸೃಷ್ಟಿಸುತ್ತಾನೆ; ಹೆಂಗಸು ಗಂಡಸನ್ನು ಆವರಿಸಿ ಕೊಳ್ಳುವಳು.

23ಇಸ್ರಾಯೇಲಿನ ದೇವರಾದ ಸೈನ್ಯಗಳ ಕರ್ತನು ಹೀಗೆ ಹೇಳುತ್ತಾನೆ; ಯೆಹೂದ ದೇಶದಲ್ಲಿಯೂ ಅದರ ಪಟ್ಟಣಗಳಲ್ಲಿಯೂ ನಾನು ಅವರನ್ನು ಸೆರೆಯಿಂದ ತಿರುಗಿ ತರುವಾಗ ನೀತಿಯ ನಿವಾಸವೇ, ಪರಿಶುದ್ಧ ಪರ್ವತವೇ, ಕರ್ತನು ನಿನ್ನನ್ನು ಆಶೀರ್ವದಿಸಲಿ ಎಂದು ಇನ್ನೂ ಹೇಳುವರು.

24ಯೆಹೂದದಲ್ಲಿಯೂ ಅದರ ಎಲ್ಲಾ ಪಟ್ಟಣಗಳಲ್ಲಿಯೂ ಬೇಸಾಯ ಮಾಡುವವರೂ ಮಂದೆಯ ಸಂಗಡ ಹೊರಡುವವರೂ ವಾಸವಾಗು ವರು.

ಯೆರೆಮಿಯ 31 ಸಂಪೂರ್ಣವಾಗಿ ಓದಿ

ಈ ವಚನವನ್ನು ಇತರ ಭಾಷೆಗಳಲ್ಲಿಯೂ ಓದಿ

KJV தமிழ் తెలుగు हिन्दी