ಯೆರೆಮಿಯ 31:23

ಇಸ್ರಾಯೇಲಿನ ದೇವರಾದ ಸೈನ್ಯಗಳ ಕರ್ತನು ಹೀಗೆ ಹೇಳುತ್ತಾನೆ; ಯೆಹೂದ ದೇಶದಲ್ಲಿಯೂ ಅದರ ಪಟ್ಟಣಗಳಲ್ಲಿಯೂ ನಾನು ಅವರನ್ನು ಸೆರೆಯಿಂದ ತಿರುಗಿ ತರುವಾಗ ನೀತಿಯ ನಿವಾಸವೇ, ಪರಿಶುದ್ಧ ಪರ್ವತವೇ, ಕರ್ತನು ನಿನ್ನನ್ನು ಆಶೀರ್ವದಿಸಲಿ ಎಂದು ಇನ್ನೂ ಹೇಳುವರು.

ಸಂದರ್ಭದೊಂದಿಗೆ ಓದಿ · ಯೆರೆಮಿಯ 31

21ನಿನಗೋಸ್ಕರ ದಾರಿಗುರುತುಗಳನ್ನು ನಿಲ್ಲಿಸು; ಎತ್ತರವಾದ ಗುಡ್ಡಗಳನ್ನು ಇರಿಸು; ಹೆದ್ದಾರಿಯ ಕಡೆಗೆ ನೀನು ಹೋದದಾರಿಗೆ ನಿನ್ನ ಹೃದಯವನ್ನು ಇಟ್ಟುಕೋ; ಇಸ್ರಾಯೇಲಿನ ಕನ್ಯಾಸ್ತ್ರೀಯೇ, ತಿರುಗಿಕೋ, ಈ ಪಟ್ಟಣಗಳಿಗೆ ತಿರುಗು.

22ಹಿಂಜರಿದ ಮಗಳೇ, ಎಷ್ಟರ ವರೆಗೆ ಅಲೆದಾಡುವಿ? ಕರ್ತನು ಭೂಮಿಯಲ್ಲಿ ಹೊಸ ದನ್ನು ಸೃಷ್ಟಿಸುತ್ತಾನೆ; ಹೆಂಗಸು ಗಂಡಸನ್ನು ಆವರಿಸಿ ಕೊಳ್ಳುವಳು.

23ಇಸ್ರಾಯೇಲಿನ ದೇವರಾದ ಸೈನ್ಯಗಳ ಕರ್ತನು ಹೀಗೆ ಹೇಳುತ್ತಾನೆ; ಯೆಹೂದ ದೇಶದಲ್ಲಿಯೂ ಅದರ ಪಟ್ಟಣಗಳಲ್ಲಿಯೂ ನಾನು ಅವರನ್ನು ಸೆರೆಯಿಂದ ತಿರುಗಿ ತರುವಾಗ ನೀತಿಯ ನಿವಾಸವೇ, ಪರಿಶುದ್ಧ ಪರ್ವತವೇ, ಕರ್ತನು ನಿನ್ನನ್ನು ಆಶೀರ್ವದಿಸಲಿ ಎಂದು ಇನ್ನೂ ಹೇಳುವರು.

24ಯೆಹೂದದಲ್ಲಿಯೂ ಅದರ ಎಲ್ಲಾ ಪಟ್ಟಣಗಳಲ್ಲಿಯೂ ಬೇಸಾಯ ಮಾಡುವವರೂ ಮಂದೆಯ ಸಂಗಡ ಹೊರಡುವವರೂ ವಾಸವಾಗು ವರು.

25ದಣಿದ ಪ್ರಾಣವನ್ನು ತೃಪ್ತಿಪಡಿಸಿದ್ದೇನೆ; ಕುಂದಿದ ಪ್ರಾಣಗಳನ್ನೆಲ್ಲಾ ತುಂಬಿಸಿದ್ದೇನೆ.

ಯೆರೆಮಿಯ 31 ಸಂಪೂರ್ಣವಾಗಿ ಓದಿ

ಈ ವಚನವನ್ನು ಇತರ ಭಾಷೆಗಳಲ್ಲಿಯೂ ಓದಿ

KJV தமிழ் తెలుగు हिन्दी