ಅವರು--ನಮಗೆ ಅರಸನಿಲ್ಲ, ನಾವು ಕರ್ತನಿಗೆ ಭಯಪಡಲಿಲ್ಲ; ಹಾಗಾದರೆ ಅರಸನು ನಮಗೆ ಏನು ಮಾಡುವನು ಎಂದು ಅಂದುಕೊಳ್ಳುವರು.
1ಇಸ್ರಾಯೇಲು ಬರಿದಾದ ದ್ರಾಕ್ಷೇಬಳ್ಳಿಯಾಗಿದೆ, ಅವನು ತನಗಾಗಿ ಫಲಫಲಿ ಸುತ್ತಾನೆ; ತನ್ನ ಬಹಳ ಫಲದ ಪ್ರಕಾರವಾಗಿ ಅವನು ಬಲಿಪೀಠಗಳನ್ನೂ ಹೆಚ್ಚಿಸಿದ್ದಾನೆ. ತನ್ನ ದೇಶದ ಒಳ್ಳೆಯ ತನದ ಪ್ರಕಾರ ಅಂದವಾದ ವಿಗ್ರಹಗಳನ್ನು ಮಾಡಿ ದ್ದಾನೆ.
2ಅವರ ಹೃದಯವು ಭೇದವಾಯಿತು, ಈಗ ಅವರು ಅಪರಾಧಿಗಳೆಂದು ಕಾಣಿಸಲ್ಪಡುವರು; ಆತನು ಅವರ ಬಲಿಪೀಠಗಳನ್ನು ಕೆಡವಿ, ಅವರ ವಿಗ್ರಹಗಳನ್ನು ನಾಶಮಾಡುವನು.
3ಅವರು--ನಮಗೆ ಅರಸನಿಲ್ಲ, ನಾವು ಕರ್ತನಿಗೆ ಭಯಪಡಲಿಲ್ಲ; ಹಾಗಾದರೆ ಅರಸನು ನಮಗೆ ಏನು ಮಾಡುವನು ಎಂದು ಅಂದುಕೊಳ್ಳುವರು.
4ಅವರು ಮಾತುಗಳನ್ನಾಡಿ ಒಡಂಬಡಿಕೆಯನ್ನು ಮಾಡು ವದಕ್ಕೆ ಸುಳ್ಳು ಪ್ರಮಾಣ ವನ್ನು ಮಾಡುತ್ತಾರೆ. ಆದದ ರಿಂದ ನ್ಯಾಯತೀರ್ಪು ವಿಷದ ಕಳೆಯ ಹಾಗೆ ಹೊಲದ ಸಾಲುಗಳಲ್ಲಿ ಮೊಳೆಯುತ್ತದೆ.
5ಬೇತಾವೆನಿನ ಕರುಗಳ ನಿಮಿತ್ತ ಸಮಾರ್ಯದ ನಿವಾಸಿಗಳು ಭಯಪಡುವರು; ಅದರ ಮಹಿಮೆಯು ಅವರಿಂದ ಕಳೆದುಹೋದ ಕಾರಣ ಅಂದು ಅದರ ವಿಷಯದಲ್ಲಿ ಸಂತೋಷಪಟ್ಟ ಜನರೂ ಪೂಜಾರಿಗಳೂ ಗೋಳಾಡುವರು.
ಈ ವಚನವನ್ನು ಇತರ ಭಾಷೆಗಳಲ್ಲಿಯೂ ಓದಿ