ನೆಹೆಮಿಯ 10:31

ಎಂದೂ ದೇಶದ ಜನರು ಸಬ್ಬತ್‌ ದಿವಸದಲ್ಲಿ ಸರಕುಗಳನ್ನೂ ಧಾನ್ಯವನ್ನೂ ಮಾರಲುತಕ್ಕೊಂಡು ಬಂದರೆ ನಾವು ಅವುಗಳನ್ನು ಸಬ್ಬತ್‌ ದಿವಸದಲ್ಲಾದರೂ ಪರಿಶುದ್ಧ ದಿವಸದಲ್ಲಾದರೂ ಅವ ರಿಂದ ಕೊಂಡುಕೊಳ್ಳುವದಿಲ್ಲವೆಂದೂ ನಾವು ಏಳನೇ ವರುಷದಲ್ಲಿ ಎಲ್ಲಾ ಕೈ ಸಾಲವನ್ನು ಬಿಟ್ಟುಬಿಡುತ್ತೇ ವೆಂದೂ ಶಪಥಕ್ಕೂ ಆಣೆಗೂ ಒಳಗಾದರು.

ಸಂದರ್ಭದೊಂದಿಗೆ ಓದಿ · ನೆಹೆಮಿಯ 10

29ಇವರು ತಮ್ಮ ಸಹೋದರರಾದ ತಮ್ಮ ಮುಖ್ಯಸ್ಥರ ಸಂಗಡ ಕೂಡಿಕೊಂಡು--ದೇವರ ಸೇವಕನಾದ ಮೋಶೆಯ ಕೈಯಿಂದ ಕೊಟ್ಟ ದೇವರ ನ್ಯಾಯಪ್ರಮಾಣದಲ್ಲಿ ನಡೆಯುತ್ತೇವೆಂದೂ ಕರ್ತ ನಾದ ನಮ್ಮ ದೇವರ ಆಜ್ಞೆಗಳನ್ನೂ ಆತನ ನ್ಯಾಯ ಗಳನ್ನೂ ಆತನ ಕಟ್ಟಳೆಗಳನ್ನೂ ಎಲ್ಲವನ್ನೂ ಕೈಕೊಂಡು ಮಾಡುತ್ತೇವೆಂದೂ;

30ನಾವು ನಮ್ಮ ಕುಮಾರ್ತೆಯರನ್ನು ಆ ದೇಶದ ಜನರಿಗೆ ಕೊಡುವದಿಲ್ಲ. ನಮ್ಮ ಕುಮಾರರಿಗೆ ಅವರ ಕುಮಾರ್ತೆಯರನ್ನು ತಕ್ಕೊಳ್ಳುವದಿಲ್ಲ

31ಎಂದೂ ದೇಶದ ಜನರು ಸಬ್ಬತ್‌ ದಿವಸದಲ್ಲಿ ಸರಕುಗಳನ್ನೂ ಧಾನ್ಯವನ್ನೂ ಮಾರಲುತಕ್ಕೊಂಡು ಬಂದರೆ ನಾವು ಅವುಗಳನ್ನು ಸಬ್ಬತ್‌ ದಿವಸದಲ್ಲಾದರೂ ಪರಿಶುದ್ಧ ದಿವಸದಲ್ಲಾದರೂ ಅವ ರಿಂದ ಕೊಂಡುಕೊಳ್ಳುವದಿಲ್ಲವೆಂದೂ ನಾವು ಏಳನೇ ವರುಷದಲ್ಲಿ ಎಲ್ಲಾ ಕೈ ಸಾಲವನ್ನು ಬಿಟ್ಟುಬಿಡುತ್ತೇ ವೆಂದೂ ಶಪಥಕ್ಕೂ ಆಣೆಗೂ ಒಳಗಾದರು.

32ಇದಲ್ಲದೆ ಸಮ್ಮುಖದ ರೊಟ್ಟಿಗೋಸ್ಕರವೂ ನಿತ್ಯ ಕಾಣಿಕೆಗೋಸ್ಕರವೂ ಸಬ್ಬತ್ತುಗಳಲ್ಲಿಯೂ ಅಮಾವಾಸ್ಯೆ ಗಳಲ್ಲಿಯೂ ಅರ್ಪಿಸುವ ನಿತ್ಯ ದಹನಬಲಿಗಳಿಗೋ ಸ್ಕರವೂ ನೇಮಿಸಿದ ಹಬ್ಬಗಳಿಗೋಸ್ಕರವೂ ಪರಿಶುದ್ಧ ವಾದವುಗಳಿಗೋಸ್ಕರವೂ

33ಇಸ್ರಾಯೇಲ್ಯರ ಪ್ರಾಯ ಶ್ಚಿತ್ತವಾದ ಪಾಪಬಲಿಗೋಸ್ಕರವೂ ನಮ್ಮ ದೇವರ ಆಲಯದ ಸಮಸ್ತ ಕಾರ್ಯಕ್ಕೋಸ್ಕರವೂ ನಮ್ಮ ದೇವರ ಆಲಯದ ಸೇವೆಯ ನಿಮಿತ್ತವಾಗಿ ವರುಷಕ್ಕೆ ಶೆಕೆಲಿನಲ್ಲಿ ಮೂರರಲ್ಲಿ ಒಂದು ಪಾಲು ಕೊಡಲು ನಮಗೆ ನಾವು ನೇಮಕ ಮಾಡಿಕೊಂಡೆವು.

ನೆಹೆಮಿಯ 10 ಸಂಪೂರ್ಣವಾಗಿ ಓದಿ

ಈ ವಚನವನ್ನು ಇತರ ಭಾಷೆಗಳಲ್ಲಿಯೂ ಓದಿ

KJV தமிழ் తెలుగు हिन्दी