ನೆಹೆಮಿಯ 10:33

ಇಸ್ರಾಯೇಲ್ಯರ ಪ್ರಾಯ ಶ್ಚಿತ್ತವಾದ ಪಾಪಬಲಿಗೋಸ್ಕರವೂ ನಮ್ಮ ದೇವರ ಆಲಯದ ಸಮಸ್ತ ಕಾರ್ಯಕ್ಕೋಸ್ಕರವೂ ನಮ್ಮ ದೇವರ ಆಲಯದ ಸೇವೆಯ ನಿಮಿತ್ತವಾಗಿ ವರುಷಕ್ಕೆ ಶೆಕೆಲಿನಲ್ಲಿ ಮೂರರಲ್ಲಿ ಒಂದು ಪಾಲು ಕೊಡಲು ನಮಗೆ ನಾವು ನೇಮಕ ಮಾಡಿಕೊಂಡೆವು.

ಸಂದರ್ಭದೊಂದಿಗೆ ಓದಿ · ನೆಹೆಮಿಯ 10

31ಎಂದೂ ದೇಶದ ಜನರು ಸಬ್ಬತ್‌ ದಿವಸದಲ್ಲಿ ಸರಕುಗಳನ್ನೂ ಧಾನ್ಯವನ್ನೂ ಮಾರಲುತಕ್ಕೊಂಡು ಬಂದರೆ ನಾವು ಅವುಗಳನ್ನು ಸಬ್ಬತ್‌ ದಿವಸದಲ್ಲಾದರೂ ಪರಿಶುದ್ಧ ದಿವಸದಲ್ಲಾದರೂ ಅವ ರಿಂದ ಕೊಂಡುಕೊಳ್ಳುವದಿಲ್ಲವೆಂದೂ ನಾವು ಏಳನೇ ವರುಷದಲ್ಲಿ ಎಲ್ಲಾ ಕೈ ಸಾಲವನ್ನು ಬಿಟ್ಟುಬಿಡುತ್ತೇ ವೆಂದೂ ಶಪಥಕ್ಕೂ ಆಣೆಗೂ ಒಳಗಾದರು.

32ಇದಲ್ಲದೆ ಸಮ್ಮುಖದ ರೊಟ್ಟಿಗೋಸ್ಕರವೂ ನಿತ್ಯ ಕಾಣಿಕೆಗೋಸ್ಕರವೂ ಸಬ್ಬತ್ತುಗಳಲ್ಲಿಯೂ ಅಮಾವಾಸ್ಯೆ ಗಳಲ್ಲಿಯೂ ಅರ್ಪಿಸುವ ನಿತ್ಯ ದಹನಬಲಿಗಳಿಗೋ ಸ್ಕರವೂ ನೇಮಿಸಿದ ಹಬ್ಬಗಳಿಗೋಸ್ಕರವೂ ಪರಿಶುದ್ಧ ವಾದವುಗಳಿಗೋಸ್ಕರವೂ

33ಇಸ್ರಾಯೇಲ್ಯರ ಪ್ರಾಯ ಶ್ಚಿತ್ತವಾದ ಪಾಪಬಲಿಗೋಸ್ಕರವೂ ನಮ್ಮ ದೇವರ ಆಲಯದ ಸಮಸ್ತ ಕಾರ್ಯಕ್ಕೋಸ್ಕರವೂ ನಮ್ಮ ದೇವರ ಆಲಯದ ಸೇವೆಯ ನಿಮಿತ್ತವಾಗಿ ವರುಷಕ್ಕೆ ಶೆಕೆಲಿನಲ್ಲಿ ಮೂರರಲ್ಲಿ ಒಂದು ಪಾಲು ಕೊಡಲು ನಮಗೆ ನಾವು ನೇಮಕ ಮಾಡಿಕೊಂಡೆವು.

34ನ್ಯಾಯಪ್ರಮಾಣದಲ್ಲಿ ಬರೆದ ಹಾಗೆ, ನಮ್ಮ ದೇವರಾಗಿರುವ ಕರ್ತನ ಬಲಿಪೀಠದ ಮೇಲೆ ಸುಡು ವದಕ್ಕೆ ನೇಮಿಸಲ್ಪಟ್ಟ ಕಾಲಗಳಲ್ಲಿ ವರುಷ ವರುಷಕ್ಕೆ ನಮ್ಮ ಪಿತೃಗಳ ಮನೆಗಳ ಪ್ರಕಾರ ನಮ್ಮ ದೇವರ ಆಲಯದೊಳಗೆ ತಕ್ಕೊಂಡು ಬರಬೇಕಾದ ಸೌದೆಯ ಅರ್ಪಣೆಗೋಸ್ಕರ ಯಾಜಕರಿಗೂ ಲೇವಿಯರಿಗೂ ಜನರಿಗೂ ಚೀಟುಗಳನ್ನು ಹಾಕಿದೆವು.

35ಕರ್ತನ ಆಲಯಕ್ಕೆ ಪ್ರತಿ ವರುಷದಲ್ಲಿಯೂ ನಮ್ಮ ಭೂಮಿಯ ಪ್ರಥಮ ಫಲಗಳನ್ನೂ ಎಲ್ಲಾ ಮರಗಳ ಸಕಲ ಫಲಗಳಿಂದ ಪ್ರಥಮ ಫಲಗಳನ್ನೂ ತರುವದಕ್ಕೂ;

ನೆಹೆಮಿಯ 10 ಸಂಪೂರ್ಣವಾಗಿ ಓದಿ

ಈ ವಚನವನ್ನು ಇತರ ಭಾಷೆಗಳಲ್ಲಿಯೂ ಓದಿ

KJV தமிழ் తెలుగు हिन्दी