೨ ಅರಸುಗಳು 9:25

ಆಗ ಯೇಹುವು ತನ್ನ ಅಧಿಪತಿ ಯಾದ ಬಿದ್ಕರನಿಗೆ--ನೀನು ಅವನನ್ನು ತೆಗೆದುಕೊಂಡು ಹೋಗಿ ಇಜ್ರೇಲ್ಯನಾದ ನಾಬೋತನ ಪಾಲಾಗಿರುವ ಹೊಲದಲ್ಲಿ ಹಾಕಿಬಿಡು.

ಸಂದರ್ಭದೊಂದಿಗೆ ಓದಿ · ೨ ಅರಸುಗಳು 9

23ಆಗ ಯೋರಾ ಮನು ಅಹಜ್ಯನಿಗೆ--ಅಹಜ್ಯನೇ, ದ್ರೋಹ ಎಂದು ಹೇಳಿ ತನ್ನ ಕೈ ತಿರುಗಿಸಿಕೊಂಡು ಓಡಿಹೋದನು.

24ಆದರೆ ಯೇಹುವು ಪೂರ್ಣಬಲದಿಂದ ಬಿಲ್ಲನ್ನು ಬೊಗ್ಗಿಸಿ ತನ್ನ ಕೈಯಿಂದ ಯೋರಾಮನನ್ನು ಅವನ ತೋಳುಗಳ ನಡುವೆ ಹೊಡೆದನು. ಬಾಣ ಹೃದಯದಲ್ಲಿ ತೂರಿ ಹೊರಟಿತು; ಅವನು ರಥದಲ್ಲಿ ಕೆಳಗೆ ಮುದುರಿ ಕೊಂಡು ಬಿದ್ದನು.

25ಆಗ ಯೇಹುವು ತನ್ನ ಅಧಿಪತಿ ಯಾದ ಬಿದ್ಕರನಿಗೆ--ನೀನು ಅವನನ್ನು ತೆಗೆದುಕೊಂಡು ಹೋಗಿ ಇಜ್ರೇಲ್ಯನಾದ ನಾಬೋತನ ಪಾಲಾಗಿರುವ ಹೊಲದಲ್ಲಿ ಹಾಕಿಬಿಡು.

26ನಾನೂ ನೀನೂ ಅವನ ತಂದೆಯಾದ ಅಹಾಬನ ಹಿಂದೆ ಕುದುರೆ ಏರಿಕೊಂಡು ಹೋಗುತ್ತಿರುವಾಗ ಕರ್ತನು ಈ ಭಾರವನ್ನು ಅವನ ಮೇಲೆ ಹೊರಿಸಿದನೆಂದು ಜ್ಞಾಪಕಮಾಡಿಕೋ. ಏನಂದರೆ--ನಾಬೋತನ ರಕ್ತವನ್ನೂ ಅವನ ಕುಮಾರರ ರಕ್ತವನ್ನೂ ನಿನ್ನೆ ನಾನು ನಿಶ್ಚಯವಾಗಿ ನೋಡಿದೆನಲ್ಲಾ ಎಂದು ಕರ್ತನು ಹೇಳುತ್ತಾನೆ. ಇದಲ್ಲದೆ--ಇದೇ ಹೊಲದಲ್ಲಿ ನಿನಗೆ ಮುಯ್ಯಿಗೆ ಮುಯ್ಯಿ ಕೊಡುವೆ ನೆಂದು ಕರ್ತನು ಹೇಳುತ್ತಾನೆ. ಆದದರಿಂದ ಕರ್ತನ ವಾಕ್ಯದ ಪ್ರಕಾರ ಅವನನ್ನು ಎತ್ತಿಕೊಂಡು ಆ ಹೊಲ ದಲ್ಲಿ ಹಾಕಿಬಿಡು ಅಂದನು.

27ಯೆಹೂದದ ಅರಸ ನಾದ ಅಹಜ್ಯನು ಇದನ್ನು ನೋಡಿದಾಗ ಅವನು ತೋಟದ ಮನೆಯ ಮಾರ್ಗವಾಗಿ ಓಡಿಹೋದನು. ಯೇಹುವು ಅವನ ಹಿಂದೆ ಹೋಗಿ--ರಥದಲ್ಲಿ ಅವ ನನ್ನು ಸಹ ಸಂಹರಿಸಿರಿ ಅಂದನು. ಇಬ್ಲೆಯಾಮಿನ ಬಳಿಯಲ್ಲಿರುವ ಗೂರ್‌ ಎಂಬ ಸ್ಥಳಕ್ಕೆ ಏರಿ ಹೋಗುವ ಮಾರ್ಗದಲ್ಲಿ ಹೊಡೆದರು. ಅವನು ಮೆಗಿದ್ದೋನಿಗೆ ಓಡಿಹೋಗಿ ಅಲ್ಲಿ ಸತ್ತುಹೋದನು.

೨ ಅರಸುಗಳು 9 ಸಂಪೂರ್ಣವಾಗಿ ಓದಿ

ಈ ವಚನವನ್ನು ಇತರ ಭಾಷೆಗಳಲ್ಲಿಯೂ ಓದಿ

KJV தமிழ் తెలుగు हिन्दी