ಆಗ ಯೋರಾ ಮನು ಅಹಜ್ಯನಿಗೆ--ಅಹಜ್ಯನೇ, ದ್ರೋಹ ಎಂದು ಹೇಳಿ ತನ್ನ ಕೈ ತಿರುಗಿಸಿಕೊಂಡು ಓಡಿಹೋದನು.
21ಯೋರಾಮನು ರಥಹೂಡಬೇಕೆಂದು ಹೇಳಿದನು. ಅವನ ರಥವು ಸಿದ್ಧವಾಯಿತು. ಆಗ ಇಸ್ರಾಯೇಲಿನ ಅರಸನಾದ ಯೋರಾಮನೂ ಯೆಹೂ ದದ ಅರಸನಾದ ಅಹಜ್ಯನೂ ಹೊರಟು ಅವನವನು ತನ್ನ ತನ್ನ ರಥದಲ್ಲಿ ಏರಿ ಯೇಹುವಿಗೆ ಎದುರಾಗಿ ಹೊರಟು ಇಜ್ರೇಲ್ಯನಾದ ನಾಬೋತನ ಹೊಲದಲ್ಲಿ ಅವನನ್ನು ಸಂಧಿಸಿದರು.
22ಯೋರಾಮನು ಯೇಹು ವನ್ನು ನೋಡಿದಾಗ--ಯೇಹುವೇ, ಸಮಾಧಾನವೋ ಅಂದನು. ಅದಕ್ಕವನು--ನಿನ್ನ ತಾಯಿಯಾದ ಈಜೆ ಬೆಲಳ ಜಾರತ್ವವೂ ಅವಳ ಮಾಟಗಳೂ ಅಧಿಕವಾಗಿರು ವಾಗ ಸಮಾಧಾನವೇನು ಅಂದನು.
23ಆಗ ಯೋರಾ ಮನು ಅಹಜ್ಯನಿಗೆ--ಅಹಜ್ಯನೇ, ದ್ರೋಹ ಎಂದು ಹೇಳಿ ತನ್ನ ಕೈ ತಿರುಗಿಸಿಕೊಂಡು ಓಡಿಹೋದನು.
24ಆದರೆ ಯೇಹುವು ಪೂರ್ಣಬಲದಿಂದ ಬಿಲ್ಲನ್ನು ಬೊಗ್ಗಿಸಿ ತನ್ನ ಕೈಯಿಂದ ಯೋರಾಮನನ್ನು ಅವನ ತೋಳುಗಳ ನಡುವೆ ಹೊಡೆದನು. ಬಾಣ ಹೃದಯದಲ್ಲಿ ತೂರಿ ಹೊರಟಿತು; ಅವನು ರಥದಲ್ಲಿ ಕೆಳಗೆ ಮುದುರಿ ಕೊಂಡು ಬಿದ್ದನು.
25ಆಗ ಯೇಹುವು ತನ್ನ ಅಧಿಪತಿ ಯಾದ ಬಿದ್ಕರನಿಗೆ--ನೀನು ಅವನನ್ನು ತೆಗೆದುಕೊಂಡು ಹೋಗಿ ಇಜ್ರೇಲ್ಯನಾದ ನಾಬೋತನ ಪಾಲಾಗಿರುವ ಹೊಲದಲ್ಲಿ ಹಾಕಿಬಿಡು.
ಈ ವಚನವನ್ನು ಇತರ ಭಾಷೆಗಳಲ್ಲಿಯೂ ಓದಿ