ಅಬ್ರಹಾಮನ ಮಗನಾದ ಇಸಾಕನ ವಂಶಾವಳಿ ಗಳು ಇವೇ; ಅಬ್ರಹಾಮನಿಂದ ಇಸಾಕನು ಹುಟ್ಟಿದನು.
17ಇಷ್ಮಾಯೇಲನು ಬದುಕಿದ ವರುಷಗಳು ನೂರ ಮೂವತ್ತೇಳು ವರುಷಗಳು; ಅವನು ಪ್ರಾಣಬಿಟ್ಟು ಸತ್ತು ತನ್ನ ಜನರೊಂದಿಗೆ ಸೇರಿಸಲ್ಪಟ್ಟನು.
18ಇದಲ್ಲದೆ ಅವರು ಹವೀಲ ಮೊದಲುಗೊಂಡು ಅಶ್ಶೂರಿಗೆ ಹೋಗುವ ಮಾರ್ಗದಲ್ಲಿ ಐಗುಪ್ತಕ್ಕೆ ಮುಂದೆ ಇರುವ ಶೂರಿನ ವರೆಗೆ ವಾಸಮಾಡಿದರು. ಅವನು ತನ್ನ ಸಹೋದರರೆಲ್ಲರ ಎದುರಿನಲ್ಲಿಯೇ ಸತ್ತನು.
19ಅಬ್ರಹಾಮನ ಮಗನಾದ ಇಸಾಕನ ವಂಶಾವಳಿ ಗಳು ಇವೇ; ಅಬ್ರಹಾಮನಿಂದ ಇಸಾಕನು ಹುಟ್ಟಿದನು.
20ಇಸಾಕನು ನಾಲ್ವತ್ತು ವರುಷದವನಾಗಿದ್ದಾಗ ಪದ್ದನ್ ಅರಾಮಿನಿಂದ ಅರಾಮ್ಯನಾದ ಬೆತೂವೇಲನ ಮಗಳೂ ಲಾಬಾನನ ಸಹೋದರಿಯೂ ಆದ ರೆಬೆಕ್ಕಳನ್ನು ಹೆಂಡತಿಯಾಗಿ ತಕ್ಕೊಂಡನು.
21ಆಕೆಯು ಬಂಜೆ ಯಾಗಿದ್ದದರಿಂದ ಇಸಾಕನು ತನ್ನ ಹೆಂಡತಿಗೋಸ್ಕರ ಕರ್ತನನ್ನು ಬೇಡಿಕೊಂಡನು. ಕರ್ತನು ಅವನ ಬೇಡಿಕೆ ಯನ್ನು ಕೇಳಿದನು. ಆದದರಿಂದ ಅವನ ಹೆಂಡತಿಯಾದ ರೆಬೆಕ್ಕಳು ಗರ್ಭಿಣಿಯಾದಳು.
ಈ ವಚನವನ್ನು ಇತರ ಭಾಷೆಗಳಲ್ಲಿಯೂ ಓದಿ