ಆದಿಕಾಂಡ 25:18

ಇದಲ್ಲದೆ ಅವರು ಹವೀಲ ಮೊದಲುಗೊಂಡು ಅಶ್ಶೂರಿಗೆ ಹೋಗುವ ಮಾರ್ಗದಲ್ಲಿ ಐಗುಪ್ತಕ್ಕೆ ಮುಂದೆ ಇರುವ ಶೂರಿನ ವರೆಗೆ ವಾಸಮಾಡಿದರು. ಅವನು ತನ್ನ ಸಹೋದರರೆಲ್ಲರ ಎದುರಿನಲ್ಲಿಯೇ ಸತ್ತನು.

ಸಂದರ್ಭದೊಂದಿಗೆ ಓದಿ · ಆದಿಕಾಂಡ 25

16ಇವರೇ ಇಷ್ಮಾಯೇಲನ ಕುಮಾರರು; ಇವುಗಳೇ ಅವರ ಗ್ರಾಮಗಳ ಕೋಟೆಗಳ ಪ್ರಕಾರವಾಗಿ ಇರುವ ಅವರ ಹೆಸರುಗಳು. ಅವರು ತಮ್ಮ ಜನಾಂಗಗಳ ಪ್ರಕಾರ ಹನ್ನೆರಡು ಮಂದಿ ಪ್ರಭುಗಳು.

17ಇಷ್ಮಾಯೇಲನು ಬದುಕಿದ ವರುಷಗಳು ನೂರ ಮೂವತ್ತೇಳು ವರುಷಗಳು; ಅವನು ಪ್ರಾಣಬಿಟ್ಟು ಸತ್ತು ತನ್ನ ಜನರೊಂದಿಗೆ ಸೇರಿಸಲ್ಪಟ್ಟನು.

18ಇದಲ್ಲದೆ ಅವರು ಹವೀಲ ಮೊದಲುಗೊಂಡು ಅಶ್ಶೂರಿಗೆ ಹೋಗುವ ಮಾರ್ಗದಲ್ಲಿ ಐಗುಪ್ತಕ್ಕೆ ಮುಂದೆ ಇರುವ ಶೂರಿನ ವರೆಗೆ ವಾಸಮಾಡಿದರು. ಅವನು ತನ್ನ ಸಹೋದರರೆಲ್ಲರ ಎದುರಿನಲ್ಲಿಯೇ ಸತ್ತನು.

19ಅಬ್ರಹಾಮನ ಮಗನಾದ ಇಸಾಕನ ವಂಶಾವಳಿ ಗಳು ಇವೇ; ಅಬ್ರಹಾಮನಿಂದ ಇಸಾಕನು ಹುಟ್ಟಿದನು.

20ಇಸಾಕನು ನಾಲ್ವತ್ತು ವರುಷದವನಾಗಿದ್ದಾಗ ಪದ್ದನ್‌ ಅರಾಮಿನಿಂದ ಅರಾಮ್ಯನಾದ ಬೆತೂವೇಲನ ಮಗಳೂ ಲಾಬಾನನ ಸಹೋದರಿಯೂ ಆದ ರೆಬೆಕ್ಕಳನ್ನು ಹೆಂಡತಿಯಾಗಿ ತಕ್ಕೊಂಡನು.

ಆದಿಕಾಂಡ 25 ಸಂಪೂರ್ಣವಾಗಿ ಓದಿ

ಈ ವಚನವನ್ನು ಇತರ ಭಾಷೆಗಳಲ್ಲಿಯೂ ಓದಿ

KJV தமிழ் తెలుగు हिन्दी