ಯೆರೆಮಿಯ 7:19

ಕರ್ತನು ಅನ್ನುತ್ತಾನೆ--ಅವರು ನಿನಗೆ ಕೋಪವನ್ನೆಬ್ಬಿಸುತ್ತಾರೋ? ಅವರ ಸ್ವಂತ ಮುಖ ಗಳು ಗಲಿಬಿಲಿಗೊಳ್ಳುವ ಹಾಗೆ ತಮಗೆ ತಾವೇ ರೇಗಿಸಿಕೊಳ್ಳುತ್ತಾರಲ್ಲವೋ?

ಸಂದರ್ಭದೊಂದಿಗೆ ಓದಿ · ಯೆರೆಮಿಯ 7

17ಯೆಹೂದದ ಪಟ್ಟಣಗಳಲ್ಲಿಯೂ ಯೆರೂಸ ಲೇಮಿನ ಬೀದಿಗಳಲ್ಲಿಯೂ ಅವರು ಮಾಡುವದನ್ನು ನೀನು ನೋಡುವದಿಲ್ಲವೋ? ಆಕಾಶದ ರಾಣಿಗೆ ದೋಸೆಗಳನ್ನು ಮಾಡುವದಕ್ಕೂ ಬೇರೆ ದೇವರುಗಳಿಗೆ ಪಾನದರ್ಪಣೆಯನ್ನು ಹೊಯ್ಯುವದಕ್ಕೂ

18ಮಕ್ಕಳು ಕಟ್ಟಿಗೆ ಕೂಡಿಸುತ್ತಾರೆ, ಅವರು ನನಗೆ ಕೋಪವೆಬ್ಬಿಸು ವದಕ್ಕಾಗಿಯೇ ತಂದೆಗಳು ಬೆಂಕಿ ಹಚ್ಚುತ್ತಾರೆ, ಹೆಂಗಸರು ಹಿಟ್ಟು ನಾದುತ್ತಾರೆ.

19ಕರ್ತನು ಅನ್ನುತ್ತಾನೆ--ಅವರು ನಿನಗೆ ಕೋಪವನ್ನೆಬ್ಬಿಸುತ್ತಾರೋ? ಅವರ ಸ್ವಂತ ಮುಖ ಗಳು ಗಲಿಬಿಲಿಗೊಳ್ಳುವ ಹಾಗೆ ತಮಗೆ ತಾವೇ ರೇಗಿಸಿಕೊಳ್ಳುತ್ತಾರಲ್ಲವೋ?

20ಆದದರಿಂದ ಕರ್ತ ನಾದ ದೇವರು ಹೀಗೆ ಹೇಳುತ್ತಾನೆ--ಇಗೋ, ಈ ಸ್ಥಳದ ಮೇಲೆಯೂ ಮನುಷ್ಯರ ಮೇಲೆಯೂ ಮೃಗಗಳ ಮೇಲೆಯೂ ಹೊಲದ ಮರಗಳ ಮೇಲೆಯೂ ಭೂಮಿಯ ಫಲದ ಮೇಲೆಯೂ ನನ್ನ ಕೋಪವೂ ಮತ್ತು ಉಗ್ರತೆಯೂ ಹೊಯ್ಯಲ್ಪಡುವದು; ಅದು ಉರಿಯುವದು ಆರಿಹೋಗುವದಿಲ್ಲ.

21ಇಸ್ರಾಯೇಲಿನ ದೇವರಾದ ಸೈನ್ಯಗಳ ಕರ್ತನು ಹೀಗೆ ಹೇಳುತ್ತಾನೆ--ನಿಮ್ಮ ದಹನಬಲಿಗಳನ್ನು ನಿಮ್ಮ ಬಲಿಗಳ ಸಂಗಡ ಕೂಡಿಸಿ ಮಾಂಸವನ್ನು ತಿನ್ನಿರಿ.

ಯೆರೆಮಿಯ 7 ಸಂಪೂರ್ಣವಾಗಿ ಓದಿ

ಈ ವಚನವನ್ನು ಇತರ ಭಾಷೆಗಳಲ್ಲಿಯೂ ಓದಿ

KJV தமிழ் తెలుగు हिन्दी