ಯೆರೆಮಿಯ 7:17

ಯೆಹೂದದ ಪಟ್ಟಣಗಳಲ್ಲಿಯೂ ಯೆರೂಸ ಲೇಮಿನ ಬೀದಿಗಳಲ್ಲಿಯೂ ಅವರು ಮಾಡುವದನ್ನು ನೀನು ನೋಡುವದಿಲ್ಲವೋ? ಆಕಾಶದ ರಾಣಿಗೆ ದೋಸೆಗಳನ್ನು ಮಾಡುವದಕ್ಕೂ ಬೇರೆ ದೇವರುಗಳಿಗೆ ಪಾನದರ್ಪಣೆಯನ್ನು ಹೊಯ್ಯುವದಕ್ಕೂ

ಸಂದರ್ಭದೊಂದಿಗೆ ಓದಿ · ಯೆರೆಮಿಯ 7

15ನಿಮ್ಮ ಸಹೋದರರೆಲ್ಲರನ್ನೂ ಎಫ್ರಾಯಾಮಿನ ಎಲ್ಲಾ ಸಂತಾನವನ್ನೂ ಹೊರಗೆ ಹಾಕಿದ ಹಾಗೆ ನಿಮ್ಮನ್ನು ನನ್ನ ಸಮ್ಮುಖದಿಂದ ಹೊರಗೆ ಹಾಕುವೆನು.

16ಆದದರಿಂದ ನೀನು ಈ ಜನರಿಗೋಸ್ಕರ ಪ್ರಾರ್ಥನೆ ಮಾಡಬೇಡ; ಅವರಿಗೋಸ್ಕರ ಮೊರೆ ಯನ್ನೂ ಪ್ರಾರ್ಥನೆಯನ್ನೂ ಎತ್ತಬೇಡ ಇಲ್ಲವೆ ನನಗೆ ವಿಜ್ಞಾಪನೆ ಮಾಡಬೇಡ; ನಾನು ಅದನ್ನು ಕೇಳಿಸಿಕೊಳ್ಳು ವದಿಲ್ಲ.

17ಯೆಹೂದದ ಪಟ್ಟಣಗಳಲ್ಲಿಯೂ ಯೆರೂಸ ಲೇಮಿನ ಬೀದಿಗಳಲ್ಲಿಯೂ ಅವರು ಮಾಡುವದನ್ನು ನೀನು ನೋಡುವದಿಲ್ಲವೋ? ಆಕಾಶದ ರಾಣಿಗೆ ದೋಸೆಗಳನ್ನು ಮಾಡುವದಕ್ಕೂ ಬೇರೆ ದೇವರುಗಳಿಗೆ ಪಾನದರ್ಪಣೆಯನ್ನು ಹೊಯ್ಯುವದಕ್ಕೂ

18ಮಕ್ಕಳು ಕಟ್ಟಿಗೆ ಕೂಡಿಸುತ್ತಾರೆ, ಅವರು ನನಗೆ ಕೋಪವೆಬ್ಬಿಸು ವದಕ್ಕಾಗಿಯೇ ತಂದೆಗಳು ಬೆಂಕಿ ಹಚ್ಚುತ್ತಾರೆ, ಹೆಂಗಸರು ಹಿಟ್ಟು ನಾದುತ್ತಾರೆ.

19ಕರ್ತನು ಅನ್ನುತ್ತಾನೆ--ಅವರು ನಿನಗೆ ಕೋಪವನ್ನೆಬ್ಬಿಸುತ್ತಾರೋ? ಅವರ ಸ್ವಂತ ಮುಖ ಗಳು ಗಲಿಬಿಲಿಗೊಳ್ಳುವ ಹಾಗೆ ತಮಗೆ ತಾವೇ ರೇಗಿಸಿಕೊಳ್ಳುತ್ತಾರಲ್ಲವೋ?

ಯೆರೆಮಿಯ 7 ಸಂಪೂರ್ಣವಾಗಿ ಓದಿ

ಈ ವಚನವನ್ನು ಇತರ ಭಾಷೆಗಳಲ್ಲಿಯೂ ಓದಿ

KJV தமிழ் తెలుగు हिन्दी