ಎಜ್ರನು 3:5

ಅದರ ತರುವಾಯ ಅವರು ನಿತ್ಯವು ತಿಂಗಳ ಮೊದಲನೇ ದಿನದಲ್ಲಿಯೂ ಕರ್ತನ ಎಲ್ಲಾ ಪರಿಶುದ್ಧ ಹಬ್ಬಗಳಲ್ಲಿಯೂ ಅರ್ಪಿಸುವ ದಹನಬಲಿಯನ್ನು ಅವನವನು ಕರ್ತನಿಗೆ ಅರ್ಪಿ ಸುವ ಉಚಿತಾರ್ಥವಾದ ಬಲಿಯನ್ನು ಅರ್ಪಿಸಿದರು.

ಸಂದರ್ಭದೊಂದಿಗೆ ಓದಿ · ಎಜ್ರನು 3

3ಬಲಿಪೀಠವನ್ನು ಅದರ ಅಧಾರಗಳ ಮೇಲೆ ಇಟ್ಟರು; ಯಾಕಂದರೆ ಆ ದೇಶದ ಜನರಿ ಗೋಸ್ಕರ ಅವರಿಗೆ ಹೆದರಿಕೆ ಇತ್ತು. ಅವರು ಅದರ ಮೇಲೆ ದಹನಬಲಿಗಳನ್ನು ಉದಯದಲ್ಲಿಯೂ ಸಾಯ ಂಕಾಲದಲ್ಲಿಯೂ ಅರ್ಪಿಸಿದರು.

4ಇದಲ್ಲದೆ ಬರೆ ಯಲ್ಪಟ್ಟ ಹಾಗೆಯೇ ಅವರು ಪರ್ಣಶಾಲೆಗಳ ಹಬ್ಬ ವನ್ನು ಆಚರಿಸಿ ಪ್ರತಿದಿನದ ಕಾರ್ಯಕ್ಕೆ ತಕ್ಕ ನೇಮಕದ ಹಾಗೆ ಲೆಕ್ಕದಿಂದ ದಿನದಿನದ ದಹನಬಲಿ ಗಳನ್ನು ಅರ್ಪಿಸಿದರು.

5ಅದರ ತರುವಾಯ ಅವರು ನಿತ್ಯವು ತಿಂಗಳ ಮೊದಲನೇ ದಿನದಲ್ಲಿಯೂ ಕರ್ತನ ಎಲ್ಲಾ ಪರಿಶುದ್ಧ ಹಬ್ಬಗಳಲ್ಲಿಯೂ ಅರ್ಪಿಸುವ ದಹನಬಲಿಯನ್ನು ಅವನವನು ಕರ್ತನಿಗೆ ಅರ್ಪಿ ಸುವ ಉಚಿತಾರ್ಥವಾದ ಬಲಿಯನ್ನು ಅರ್ಪಿಸಿದರು.

6ಏಳನೇಯ ತಿಂಗಳಿನ ಮೊದಲನೇ ದಿವಸದಲ್ಲಿ ಕರ್ತ ನಿಗೆ ದಹನಬಲಿಗಳನ್ನು ಅರ್ಪಿಸಲು ಪ್ರಾರಂಭಿಸಿದರು. ಆದರೆ ಕರ್ತನ ಮಂದಿರದ ಅಸ್ತಿವಾರವು ಇನ್ನೂ ಹಾಕಲ್ಪಟ್ಟಿರಲಿಲ್ಲ.

7ಇದಲ್ಲದೆ ಅವರು ಕಲ್ಲುಕುಟಿಕರಿಗೂ ಬಡಗಿಯ ವರಿಗೂ ಹಣವನ್ನು ಕೊಟ್ಟು ಪಾರಸಿಯ ಅರಸನಾದ ಕೋರೆಷನಿಂದ ಹೊಂದಿದ ಅಪ್ಪಣೆಯ ಪ್ರಕಾರ ಲೆಬನೋನಿನಿಂದ ಯೊಪ್ಪದ ಸಮುದ್ರದ ಮಟ್ಟಿಗೂ ದೇವದಾರು ಮರಗಳನ್ನು ತಕ್ಕೊಂಡು ಬರಲು ಚೀದೋ ನ್ಯರಿಗೂ ತೂರ್ಯರಿಗೂ ಅನ್ನ ಪಾನಗಳನ್ನೂ ಎಣ್ಣೆ ಯನ್ನೂ ಕೊಟ್ಟನು.

ಎಜ್ರನು 3 ಸಂಪೂರ್ಣವಾಗಿ ಓದಿ

ಈ ವಚನವನ್ನು ಇತರ ಭಾಷೆಗಳಲ್ಲಿಯೂ ಓದಿ

KJV தமிழ் తెలుగు हिन्दी