ಆದಿಕಾಂಡ 6:16

ನೀನು ನಾವೆಗೆ ಕಿಟಕಿಯನ್ನು ಮಾಡಬೇಕು; ಒಂದು ಮೊಳದೊಳಗೆ ಅದನ್ನು ಮೇಲ್ಭಾಗದಲ್ಲಿ ಮುಗಿಸಬೇಕು. ಅದರ ಪಕ್ಕದಲ್ಲಿ ನಾವೆಯ ಬಾಗಲನ್ನು ಇಡಬೇಕು; ಕೆಳಗಿನದು ಎರಡನೆಯದು ಮೂರನೆಯದು ಎಂಬ ಅಂತಸ್ತುಗಳನ್ನು ಅದಕ್ಕೆ ಮಾಡಬೇಕು.

ಸಂದರ್ಭದೊಂದಿಗೆ ಓದಿ · ಆದಿಕಾಂಡ 6

14ನೀನು ಗೋಫೆರ್‌ ಮರದಿಂದ ನಾವೆಯನ್ನು ಮಾಡಿಕೊಂಡು ಆ ನಾವೆಯಲ್ಲಿ ಕೋಣೆಗಳನ್ನು ಮಾಡು; ಅದರ ಹೊರಭಾಗಕ್ಕೂ ಒಳಭಾಗಕ್ಕೂ ರಾಳವನ್ನು ಹಚ್ಚು.

15ನೀನು ಅದನ್ನು ಮಾಡತಕ್ಕ ಮಾದರಿಯು ಇದೇ; ನಾವೆಯ ಉದ್ದವು ಮುನ್ನೂರು ಮೊಳ ಅಗಲ ಐವತ್ತು ಮೊಳ ಎತ್ತರ ಮೂವತ್ತು ಮೊಳ ಇರಬೇಕು.

16ನೀನು ನಾವೆಗೆ ಕಿಟಕಿಯನ್ನು ಮಾಡಬೇಕು; ಒಂದು ಮೊಳದೊಳಗೆ ಅದನ್ನು ಮೇಲ್ಭಾಗದಲ್ಲಿ ಮುಗಿಸಬೇಕು. ಅದರ ಪಕ್ಕದಲ್ಲಿ ನಾವೆಯ ಬಾಗಲನ್ನು ಇಡಬೇಕು; ಕೆಳಗಿನದು ಎರಡನೆಯದು ಮೂರನೆಯದು ಎಂಬ ಅಂತಸ್ತುಗಳನ್ನು ಅದಕ್ಕೆ ಮಾಡಬೇಕು.

17ಇಗೋ, ನಾನು ನಾನಾಗಿಯೇ ಆಕಾಶದ ಕೆಳಗೆ ಜೀವಶ್ವಾಸವಿರುವವುಗಳನ್ನೆಲ್ಲಾ ನಾಶ ಮಾಡುವದಕ್ಕೆ ಜಲಪ್ರಳಯವನ್ನು ಭೂಮಿಯ ಮೇಲೆ ಬರಮಾಡುತ್ತೇನೆ; ಆಗ ಭೂಮಿಯಲ್ಲಿರುವದೆಲ್ಲಾ ಸತ್ತುಹೋಗುವದು.

18ಆದರೆ ನಿನ್ನ ಸಂಗಡ ನನ್ನ ಒಡಂಬಡಿಕೆಯನ್ನು ಸ್ಥಾಪಿಸುವೆನು; ನೀನೂ ನಿನ್ನ ಹೆಂಡತಿ ಮಕ್ಕಳು ಸೂಸೆಯರ ಸಂಗಡ ನಾವೆ ಯೊಳಗೆ ಬರಬೇಕು.

ಆದಿಕಾಂಡ 6 ಸಂಪೂರ್ಣವಾಗಿ ಓದಿ

ಈ ವಚನವನ್ನು ಇತರ ಭಾಷೆಗಳಲ್ಲಿಯೂ ಓದಿ

KJV தமிழ் తెలుగు हिन्दी