ನೀನು ಅದನ್ನು ಮಾಡತಕ್ಕ ಮಾದರಿಯು ಇದೇ; ನಾವೆಯ ಉದ್ದವು ಮುನ್ನೂರು ಮೊಳ ಅಗಲ ಐವತ್ತು ಮೊಳ ಎತ್ತರ ಮೂವತ್ತು ಮೊಳ ಇರಬೇಕು.
13ಆಗ ದೇವರು ನೋಹನಿಗೆ--ಮನುಷ್ಯರೆಲ್ಲರ ಅಂತ್ಯವು ನನ್ನ ಮುಂದೆ ಬಂತು; ಅವರಿಂದ ಭೂಮಿಯು ಬಲಾತ್ಕಾರದಿಂದ ತುಂಬಿದೆ; ಇಗೋ, ನಾನು ಭೂಮಿಯೊಂದಿಗೆ ಅವರನ್ನು ನಾಶಮಾಡು ವೆನು.
14ನೀನು ಗೋಫೆರ್ ಮರದಿಂದ ನಾವೆಯನ್ನು ಮಾಡಿಕೊಂಡು ಆ ನಾವೆಯಲ್ಲಿ ಕೋಣೆಗಳನ್ನು ಮಾಡು; ಅದರ ಹೊರಭಾಗಕ್ಕೂ ಒಳಭಾಗಕ್ಕೂ ರಾಳವನ್ನು ಹಚ್ಚು.
15ನೀನು ಅದನ್ನು ಮಾಡತಕ್ಕ ಮಾದರಿಯು ಇದೇ; ನಾವೆಯ ಉದ್ದವು ಮುನ್ನೂರು ಮೊಳ ಅಗಲ ಐವತ್ತು ಮೊಳ ಎತ್ತರ ಮೂವತ್ತು ಮೊಳ ಇರಬೇಕು.
16ನೀನು ನಾವೆಗೆ ಕಿಟಕಿಯನ್ನು ಮಾಡಬೇಕು; ಒಂದು ಮೊಳದೊಳಗೆ ಅದನ್ನು ಮೇಲ್ಭಾಗದಲ್ಲಿ ಮುಗಿಸಬೇಕು. ಅದರ ಪಕ್ಕದಲ್ಲಿ ನಾವೆಯ ಬಾಗಲನ್ನು ಇಡಬೇಕು; ಕೆಳಗಿನದು ಎರಡನೆಯದು ಮೂರನೆಯದು ಎಂಬ ಅಂತಸ್ತುಗಳನ್ನು ಅದಕ್ಕೆ ಮಾಡಬೇಕು.
17ಇಗೋ, ನಾನು ನಾನಾಗಿಯೇ ಆಕಾಶದ ಕೆಳಗೆ ಜೀವಶ್ವಾಸವಿರುವವುಗಳನ್ನೆಲ್ಲಾ ನಾಶ ಮಾಡುವದಕ್ಕೆ ಜಲಪ್ರಳಯವನ್ನು ಭೂಮಿಯ ಮೇಲೆ ಬರಮಾಡುತ್ತೇನೆ; ಆಗ ಭೂಮಿಯಲ್ಲಿರುವದೆಲ್ಲಾ ಸತ್ತುಹೋಗುವದು.
ಈ ವಚನವನ್ನು ಇತರ ಭಾಷೆಗಳಲ್ಲಿಯೂ ಓದಿ