ಆದಿಕಾಂಡ 16:10

ಇದಲ್ಲದೆ ಕರ್ತನ ದೂತನು ಅವಳಿಗೆ--ನಿನ್ನ ಸಂತತಿಯನ್ನು ಬಹಳವಾಗಿ ಹೆಚ್ಚಿಸುವೆನು; ಅದು ಹೆಚ್ಚಾಗುವದರಿಂದ ಅದನ್ನು ಲೆಕ್ಕಿಸುವದಕ್ಕಾಗುವದಿಲ್ಲ ಅಂದನು.

ಸಂದರ್ಭದೊಂದಿಗೆ ಓದಿ · ಆದಿಕಾಂಡ 16

8ಸಾರಯಳ ದಾಸಿಯಾದ ಹಾಗರಳೇ, ನೀನು ಎಲ್ಲಿಂದ ಬಂದಿ? ನೀನು ಎಲ್ಲಿಗೆ ಹೋಗುತ್ತೀ ಅಂದನು. ಅವಳು--ನನ್ನ ಯಜಮಾನಿಯಾದ ಸಾರ ಯಳ ಸಮ್ಮುಖದಿಂದ ಓಡಿ ಹೋಗುತ್ತಿದ್ದೇನೆ ಅಂದಳು.

9ಕರ್ತನ ದೂತನು ಅವಳಿಗೆ--ನಿನ್ನ ಯಜಮಾನಿಯ ಬಳಿಗೆ ಹಿಂತಿರುಗಿ ಹೋಗಿ ಅವಳಿಗೆ ನೀನು ಅಧೀನಳಾಗಿರು ಅಂದನು.

10ಇದಲ್ಲದೆ ಕರ್ತನ ದೂತನು ಅವಳಿಗೆ--ನಿನ್ನ ಸಂತತಿಯನ್ನು ಬಹಳವಾಗಿ ಹೆಚ್ಚಿಸುವೆನು; ಅದು ಹೆಚ್ಚಾಗುವದರಿಂದ ಅದನ್ನು ಲೆಕ್ಕಿಸುವದಕ್ಕಾಗುವದಿಲ್ಲ ಅಂದನು.

11ಕರ್ತನ ದೂತನು ಅವಳಿಗೆ--ಇಗೋ, ನೀನು ಗರ್ಭಿಣಿ ಯಾಗಿದ್ದೀ, ನೀನು ಒಬ್ಬ ಮಗನನ್ನು ಹೆರುವಿ; ಅವನಿಗೆ ಇಷ್ಮಾಯೇಲ ಎಂದು ಹೆಸರಿಡಬೇಕು. ಯಾಕಂದರೆ ಕರ್ತನು ನಿನ್ನ ವ್ಯಥೆಯನ್ನು ಕೇಳಿದ್ದಾನೆ.

12ಅವನು ಕಾಡು ಮನುಷ್ಯನಾಗಿರುವನು; ಎಲ್ಲರಿಗೆ ವಿರೋಧವಾಗಿ ಅವನ ಕೈಯೂ ಅವನಿಗೆ ವಿರೋಧ ವಾಗಿ ಎಲ್ಲರ ಕೈಯೂ ಇರುವದು, ಅವನು ತನ್ನ ಸಹೋದರರೆಲ್ಲರ ಎದುರಿನಲ್ಲಿ ವಾಸವಾಗಿರುವನು ಅಂದನು.

ಆದಿಕಾಂಡ 16 ಸಂಪೂರ್ಣವಾಗಿ ಓದಿ

ಈ ವಚನವನ್ನು ಇತರ ಭಾಷೆಗಳಲ್ಲಿಯೂ ಓದಿ

KJV தமிழ் తెలుగు हिन्दी