ಆದಿಕಾಂಡ 16:12

ಅವನು ಕಾಡು ಮನುಷ್ಯನಾಗಿರುವನು; ಎಲ್ಲರಿಗೆ ವಿರೋಧವಾಗಿ ಅವನ ಕೈಯೂ ಅವನಿಗೆ ವಿರೋಧ ವಾಗಿ ಎಲ್ಲರ ಕೈಯೂ ಇರುವದು, ಅವನು ತನ್ನ ಸಹೋದರರೆಲ್ಲರ ಎದುರಿನಲ್ಲಿ ವಾಸವಾಗಿರುವನು ಅಂದನು.

ಸಂದರ್ಭದೊಂದಿಗೆ ಓದಿ · ಆದಿಕಾಂಡ 16

10ಇದಲ್ಲದೆ ಕರ್ತನ ದೂತನು ಅವಳಿಗೆ--ನಿನ್ನ ಸಂತತಿಯನ್ನು ಬಹಳವಾಗಿ ಹೆಚ್ಚಿಸುವೆನು; ಅದು ಹೆಚ್ಚಾಗುವದರಿಂದ ಅದನ್ನು ಲೆಕ್ಕಿಸುವದಕ್ಕಾಗುವದಿಲ್ಲ ಅಂದನು.

11ಕರ್ತನ ದೂತನು ಅವಳಿಗೆ--ಇಗೋ, ನೀನು ಗರ್ಭಿಣಿ ಯಾಗಿದ್ದೀ, ನೀನು ಒಬ್ಬ ಮಗನನ್ನು ಹೆರುವಿ; ಅವನಿಗೆ ಇಷ್ಮಾಯೇಲ ಎಂದು ಹೆಸರಿಡಬೇಕು. ಯಾಕಂದರೆ ಕರ್ತನು ನಿನ್ನ ವ್ಯಥೆಯನ್ನು ಕೇಳಿದ್ದಾನೆ.

12ಅವನು ಕಾಡು ಮನುಷ್ಯನಾಗಿರುವನು; ಎಲ್ಲರಿಗೆ ವಿರೋಧವಾಗಿ ಅವನ ಕೈಯೂ ಅವನಿಗೆ ವಿರೋಧ ವಾಗಿ ಎಲ್ಲರ ಕೈಯೂ ಇರುವದು, ಅವನು ತನ್ನ ಸಹೋದರರೆಲ್ಲರ ಎದುರಿನಲ್ಲಿ ವಾಸವಾಗಿರುವನು ಅಂದನು.

13ಹಾಗರಳು ತನ್ನ ಸಂಗಡ ಮಾತನಾಡಿದ ಕರ್ತನಿಗೆ--ನೀನು ನನ್ನನ್ನು ನೋಡುವ ದೇವರು ಎಂದು ಹೆಸರಿಟ್ಟಳು. ಯಾಕಂದರೆ ನನ್ನನ್ನು ನೋಡುವಾ ತನನ್ನು ನಾನು ಇಲ್ಲಿಯೂ ನೋಡುವಂತಾಯಿತಲ್ಲಾ ಎಂದು ಅಂದುಕೊಂಡಳು.

14ಆದದರಿಂದ ಆ ಬಾವಿಗೆ ಬೆರ್‌ ಲಹೈರೋಯಿ ಎಂದು ಹೆಸರಾಯಿತು. ಅದು ಕಾದೇಶಿಗೂ ಬೆರೆದಿಗೂ ಮಧ್ಯದಲ್ಲಿ ಇದೆ.

ಆದಿಕಾಂಡ 16 ಸಂಪೂರ್ಣವಾಗಿ ಓದಿ

ಈ ವಚನವನ್ನು ಇತರ ಭಾಷೆಗಳಲ್ಲಿಯೂ ಓದಿ

KJV தமிழ் తెలుగు हिन्दी