೧ ಸಮುವೇಲನು 14:16

ಬೆನ್ಯಾವಿಾ ನನ ದೇಶದ ಗಿಬೆಯದಲ್ಲಿದ್ದ ಸೌಲನ ಕಾವಲಿನವರು ನೋಡಿದಾಗ ಇಗೋ, ಆ ಗುಂಪಿನವರು ಕಡಿಮೆ ಯಾಗುತ್ತಾ ಒಬ್ಬರನ್ನೊಬ್ಬರು ಸಂಹರಿಸುತ್ತಾ ಇದ್ದರು.

ಸಂದರ್ಭದೊಂದಿಗೆ ಓದಿ · ೧ ಸಮುವೇಲನು 14

14ಯೋನಾತಾನನೂ ಅವನ ಆಯುಧ ಗಳನ್ನು ಹೊರುವವನೂ ಹೊಡೆದ ಆ ಮೊದಲ ಸಂಹಾರದಲ್ಲಿ ಅರ್ಧ ಎಕರೆ ಭೂಮಿಯಲ್ಲಿ ಬಿದ್ದವರು ಸುಮಾರು ಇಪ್ಪತ್ತು ಜನರಾಗಿದ್ದರು.

15ಆಗ ದಂಡಿನ ಹೊಲದಲ್ಲಿಯ ಸಕಲ ಜನರಲ್ಲಿಯೂ ಭಯದಿಂದ ನಡುಕ ಉಂಟಾಯಿತು. ಠಾಣದವರೂ ಕೊಳ್ಳೆಗಾರರೂ ಹೆದರಿಕೊಂಡರು; ಇದಲ್ಲದೆ ಭೂಮಿ ಕಂಪಿಸಿತು. ಹೀಗೆ ಅಲ್ಲಿ ಮಹಾದೊಡ್ಡ ಕಳವಳವಾಯಿತು.

16ಬೆನ್ಯಾವಿಾ ನನ ದೇಶದ ಗಿಬೆಯದಲ್ಲಿದ್ದ ಸೌಲನ ಕಾವಲಿನವರು ನೋಡಿದಾಗ ಇಗೋ, ಆ ಗುಂಪಿನವರು ಕಡಿಮೆ ಯಾಗುತ್ತಾ ಒಬ್ಬರನ್ನೊಬ್ಬರು ಸಂಹರಿಸುತ್ತಾ ಇದ್ದರು.

17ಆಗ ಸೌಲನು ತನ್ನ ಬಳಿಯಲ್ಲಿದ್ದ ಜನರಿಗೆ--ನಮ್ಮ ಬಳಿಯಿಂದ ಹೋದವರು ಯಾರೆಂದು ಲೆಕ್ಕವನ್ನು ನೋಡಿರಿ ಅಂದನು. ಅವರು ಲೆಕ್ಕ ನೋಡುವಾಗ ಇಗೋ, ಯೋನಾತಾನನೂ ಅವನ ಆಯುಧಗಳನ್ನು ಹೊರುವವನೂ ಅಲ್ಲಿ ಇರಲಿಲ್ಲ.

18ಆಗ ಸೌಲನು ಅಹೀಯನಿಗೆ -- ನೀನು ದೇವರ ಮಂಜೂಷವನ್ನು ತಕ್ಕೊಂಡು ಬಾ ಅಂದನು. ಯಾಕಂದರೆ ದೇವರ ಮಂಜೂಷವು ಆ ಕಾಲದಲ್ಲಿ ಇಸ್ರಾಯೇಲ್‌ ಮಕ್ಕಳ ಬಳಿಯಲ್ಲಿತ್ತು.

೧ ಸಮುವೇಲನು 14 ಸಂಪೂರ್ಣವಾಗಿ ಓದಿ

ಈ ವಚನವನ್ನು ಇತರ ಭಾಷೆಗಳಲ್ಲಿಯೂ ಓದಿ

KJV தமிழ் తెలుగు हिन्दी