ಧರ್ಮೋಪದೇಶಕಾಂಡ 1:17

ನ್ಯಾಯದಲ್ಲಿ ನೀವು ಮುಖದಾಕ್ಷಿಣ್ಯ ನೋಡಬೇಡಿರಿ; ಹಿರಿಯನನ್ನು ಹೇಗೋ, ಹಾಗೆಯೇ ಕಿರಿಯನನ್ನು ಕೇಳಬೇಕು; ಮನುಷ್ಯನ ಮುಖವನ್ನು ನೋಡಿ ಹೆದರಬೇಡಿರಿ; ಯಾಕಂದರೆ ನ್ಯಾಯತೀರ್ಪು ದೇವರದೇ; ನಿಮಗೆ ಕಠಿಣವಾದ ವ್ಯಾಜ್ಯಗಳನ್ನು ನನ್ನ ಮುಂದೆ ತನ್ನಿರಿ; ಆಗ ನಾನು ಅದನ್ನು ತೀರಿಸುವೆನು.

ಸಂದರ್ಭದೊಂದಿಗೆ ಓದಿ · ಧರ್ಮೋಪದೇಶಕಾಂಡ 1

15ನಾನು ನಿಮ್ಮ ಕುಟುಂಬಗಳ ಮುಖ್ಯಸ್ಥರಾಗಿದ್ದ ಜ್ಞಾನಿಗಳಾದ ಪ್ರಸಿದ್ಧ ಮನುಷ್ಯರನ್ನು ತಕ್ಕೊಂಡು ನಿಮ್ಮ ಮೇಲೆ ಮುಖ್ಯಸ್ಥರಾಗಿರುವ ಹಾಗೆ ಸಹಸ್ರಾಧಿ ಪತಿಗಳಾಗಿಯೂ ಶತಾಧಿಪತಿಗಳಾಗಿಯೂ ಪಂಚಶ ತಾಧಿಪತಿಗಳಾಗಿಯೂ ದಶಾಧಿಪತಿಗಳಾಗಿಯೂ

16ನಿಮ್ಮ ಗೋತ್ರಗಳಿಗೆ ಅಧಿಕಾರಿಗಳಾಗಿಯೂ ಮಾಡಿದೆನು. ಆ ಕಾಲದಲ್ಲಿ ನಿಮ್ಮ ನ್ಯಾಯಾಧಿಪತಿಗಳಿಗೆ ಕೊಟ್ಟ ಅಪ್ಪಣೆ ಏನಂದರೆ--ನಿಮ್ಮ ಸಹೋದರರು ತಮ್ಮಲ್ಲಿ ಮಾಡುವ ವ್ಯಾಜ್ಯಗಳನ್ನು ಕೇಳಿ ಒಬ್ಬೊಬ್ಬ ನಿಗೂ ಅವನ ಸಹೋದರನಿಗೂ ಅವನ ಪರವಾ ಸಿಗೂ ನೀತಿಯಾಗಿ ನ್ಯಾಯತೀರಿಸಿರಿ.

17ನ್ಯಾಯದಲ್ಲಿ ನೀವು ಮುಖದಾಕ್ಷಿಣ್ಯ ನೋಡಬೇಡಿರಿ; ಹಿರಿಯನನ್ನು ಹೇಗೋ, ಹಾಗೆಯೇ ಕಿರಿಯನನ್ನು ಕೇಳಬೇಕು; ಮನುಷ್ಯನ ಮುಖವನ್ನು ನೋಡಿ ಹೆದರಬೇಡಿರಿ; ಯಾಕಂದರೆ ನ್ಯಾಯತೀರ್ಪು ದೇವರದೇ; ನಿಮಗೆ ಕಠಿಣವಾದ ವ್ಯಾಜ್ಯಗಳನ್ನು ನನ್ನ ಮುಂದೆ ತನ್ನಿರಿ; ಆಗ ನಾನು ಅದನ್ನು ತೀರಿಸುವೆನು.

18ಆ ಸಮಯದಲ್ಲಿ ನೀವು ಮಾಡತಕ್ಕ ಕಾರ್ಯಗಳನ್ನೆಲ್ಲಾ ನಿಮಗೆ ಆಜ್ಞಾಪಿಸಿದೆನು.

19ಆಗ ನೀವು ಹೋರೇಬಿನಿಂದ ಹೊರಟು ನಮ್ಮ ದೇವರಾದ ಕರ್ತನು ನಮಗೆ ಆಜ್ಞಾಪಿಸಿದ ಪ್ರಕಾರ ನೀವು ಅಮೋರಿಯರ ಬೆಟ್ಟದ ಮಾರ್ಗದಲ್ಲಿ ನೋಡಿದ ಆ ದೊಡ್ಡ ಭಯಂಕರವಾದ ಅರಣ್ಯವನ್ನೆಲ್ಲಾ ದಾಟಿ ಕಾದೇಶ್‌ಬರ್ನೇಯಕ್ಕೆ ಬಂದೆವು.

ಧರ್ಮೋಪದೇಶಕಾಂಡ 1 ಸಂಪೂರ್ಣವಾಗಿ ಓದಿ

ಈ ವಚನವನ್ನು ಇತರ ಭಾಷೆಗಳಲ್ಲಿಯೂ ಓದಿ

KJV தமிழ் తెలుగు हिन्दी