ಯೆಹೋಶುವ 24:12

ಇದಲ್ಲದೆ ನಾನು ನಿಮ್ಮ ಮುಂದೆ ಕಡಜದ ಹುಳಗಳನ್ನು ಕಳು ಹಿಸಿದೆನು. ಅವು ಅವರನ್ನೂ ಅಮೋರಿಯರ ಇಬ್ಬರು ಅರಸುಗಳನ್ನೂ ಓಡಿಸಿಬಿಟ್ಟವು; ನಿಮ್ಮ ಕತ್ತಿ, ಬಿಲ್ಲುಗ ಳಿಂದಲ್ಲ.

ಸಂದರ್ಭದೊಂದಿಗೆ ಓದಿ · ಯೆಹೋಶುವ 24

10ಆದರೆ ನಾನು ಬಿಳಾಮನ ಮಾತನ್ನು ಕೇಳಲು ಮನಸ್ಸಿಲ್ಲದ್ದರಿಂದ ಅವನು ನಿಮ್ಮನ್ನು ಆಶೀರ್ವದಿ ಸುತ್ತಲೇ ಇರಬೇಕಾಯಿತು. ಹೀಗೆ ನಾನು ಅವನ ಕೈಯಿಂದ ನಿಮ್ಮನ್ನು ತಪ್ಪಿಸಿದೆನು.

11ನೀವು ಯೊರ್ದನನ್ನು ದಾಟಿ ಯೆರಿಕೋವಿಗೆ ಬಂದಿರಿ. ಯೆರಿಕೋವಿನ ನಿವಾಸಿ ಗಳೂ ಅಮೋರಿಯರೂ ಪೆರಿಜ್ಜೀಯರೂ ಕಾನಾನ್ಯರೂ ಹಿತ್ತಿಯರೂ ಗಿರ್ಗಾಷಿಯರೂ ಹಿವ್ವಿಯರೂ ಯೆಬೂಸಿ ಯರೂ ನಿಮ್ಮ ಸಂಗಡ ಯುದ್ಧಮಾಡಿದರು. ಆದರೆ ನಾನು ಅವರನ್ನೂ ನಿಮ್ಮ ಕೈಗೆ ಒಪ್ಪಿಸಿದೆನು.

12ಇದಲ್ಲದೆ ನಾನು ನಿಮ್ಮ ಮುಂದೆ ಕಡಜದ ಹುಳಗಳನ್ನು ಕಳು ಹಿಸಿದೆನು. ಅವು ಅವರನ್ನೂ ಅಮೋರಿಯರ ಇಬ್ಬರು ಅರಸುಗಳನ್ನೂ ಓಡಿಸಿಬಿಟ್ಟವು; ನಿಮ್ಮ ಕತ್ತಿ, ಬಿಲ್ಲುಗ ಳಿಂದಲ್ಲ.

13ನೀವು ದುಡಿಯದ ಭೂಮಿಯನ್ನೂ ನೀವು ಕಟ್ಟದ ಪಟ್ಟಣಗಳನ್ನೂ ನಾನು ನಿಮಗೆ ಕೊಟ್ಟೆನು; ನೀವು ಅವುಗಳಲ್ಲಿ ವಾಸವಾಗಿದ್ದೀರಿ; ನೀವು ನೆಡದ ದ್ರಾಕ್ಷೇ ತೋಟಗಳ ಫಲವನ್ನೂ ಇಪ್ಪೇತೋಪುಗಳ ಫಲವನ್ನೂ ತಿನ್ನುತ್ತೀರಿ ಎಂಬದೇ.

14ಆದದರಿಂದ ಈಗ ಕರ್ತನಿಗೆ ಭಯಪಟ್ಟು ಯಥಾರ್ಥದಲ್ಲಿಯೂ ಸತ್ಯದಲ್ಲಿಯೂ ಆತನನ್ನು ಸೇವಿಸಿರಿ. ನಿಮ್ಮ ತಂದೆಗಳು ನದಿಯ ಆಚೆಯಲ್ಲಿಯೂ ಐಗುಪ್ತದಲ್ಲಿಯೂ ಸೇವಿ ಸಿದ ದೇವರುಗಳನ್ನು ತೊರೆದುಬಿಟ್ಟು ಕರ್ತನನ್ನೇ ನೀವು ಸೇವಿಸಿರಿ.

ಯೆಹೋಶುವ 24 ಸಂಪೂರ್ಣವಾಗಿ ಓದಿ

ಈ ವಚನವನ್ನು ಇತರ ಭಾಷೆಗಳಲ್ಲಿಯೂ ಓದಿ

KJV தமிழ் తెలుగు हिन्दी