ಯೆಹೋಶುವ 24:14

ಆದದರಿಂದ ಈಗ ಕರ್ತನಿಗೆ ಭಯಪಟ್ಟು ಯಥಾರ್ಥದಲ್ಲಿಯೂ ಸತ್ಯದಲ್ಲಿಯೂ ಆತನನ್ನು ಸೇವಿಸಿರಿ. ನಿಮ್ಮ ತಂದೆಗಳು ನದಿಯ ಆಚೆಯಲ್ಲಿಯೂ ಐಗುಪ್ತದಲ್ಲಿಯೂ ಸೇವಿ ಸಿದ ದೇವರುಗಳನ್ನು ತೊರೆದುಬಿಟ್ಟು ಕರ್ತನನ್ನೇ ನೀವು ಸೇವಿಸಿರಿ.

ಸಂದರ್ಭದೊಂದಿಗೆ ಓದಿ · ಯೆಹೋಶುವ 24

12ಇದಲ್ಲದೆ ನಾನು ನಿಮ್ಮ ಮುಂದೆ ಕಡಜದ ಹುಳಗಳನ್ನು ಕಳು ಹಿಸಿದೆನು. ಅವು ಅವರನ್ನೂ ಅಮೋರಿಯರ ಇಬ್ಬರು ಅರಸುಗಳನ್ನೂ ಓಡಿಸಿಬಿಟ್ಟವು; ನಿಮ್ಮ ಕತ್ತಿ, ಬಿಲ್ಲುಗ ಳಿಂದಲ್ಲ.

13ನೀವು ದುಡಿಯದ ಭೂಮಿಯನ್ನೂ ನೀವು ಕಟ್ಟದ ಪಟ್ಟಣಗಳನ್ನೂ ನಾನು ನಿಮಗೆ ಕೊಟ್ಟೆನು; ನೀವು ಅವುಗಳಲ್ಲಿ ವಾಸವಾಗಿದ್ದೀರಿ; ನೀವು ನೆಡದ ದ್ರಾಕ್ಷೇ ತೋಟಗಳ ಫಲವನ್ನೂ ಇಪ್ಪೇತೋಪುಗಳ ಫಲವನ್ನೂ ತಿನ್ನುತ್ತೀರಿ ಎಂಬದೇ.

14ಆದದರಿಂದ ಈಗ ಕರ್ತನಿಗೆ ಭಯಪಟ್ಟು ಯಥಾರ್ಥದಲ್ಲಿಯೂ ಸತ್ಯದಲ್ಲಿಯೂ ಆತನನ್ನು ಸೇವಿಸಿರಿ. ನಿಮ್ಮ ತಂದೆಗಳು ನದಿಯ ಆಚೆಯಲ್ಲಿಯೂ ಐಗುಪ್ತದಲ್ಲಿಯೂ ಸೇವಿ ಸಿದ ದೇವರುಗಳನ್ನು ತೊರೆದುಬಿಟ್ಟು ಕರ್ತನನ್ನೇ ನೀವು ಸೇವಿಸಿರಿ.

15ಕರ್ತನನ್ನು ಸೇವಿಸುವದು ನಿಮಗೆ ಕೆಟ್ಟದ್ದಾಗಿ ಕಂಡರೆ ಈಹೊತ್ತು ನೀವು ಯಾರನ್ನು ಸೇವಿಸುವಿರಿ? ನಿಮ್ಮ ತಂದೆಗಳು ನದಿಯ ಆಚೆ ಸೇವಿ ಸಿದ ದೇವರುಗಳನ್ನೋ ಇಲ್ಲವೆ ನೀವು ವಾಸವಾಗಿರುವ ಅಮೋರಿಯರ ದೇವರುಗಳನ್ನೋ? ನೀವು ಆರಿಸಿ ಕೊಳ್ಳಿರಿ; ಆದರೆ ನಾನೂ ನನ್ನ ಮನೆಯವರೂ ಕರ್ತನನ್ನೇ ಸೇವಿಸುವೆವು ಅಂದನು.

16ಜನರು ಅವನಿಗೆ ಪ್ರತ್ಯುತ್ತರಕೊಟ್ಟು--ನಾವು ಕರ್ತನನ್ನು ಬಿಟ್ಟು ಅನ್ಯ ದೇವತೆಗಳನ್ನು ಸೇವಿಸುವ ಕಾರ್ಯವು ನಮಗೆ ದೂರವಾಗಿರಲಿ.

ಯೆಹೋಶುವ 24 ಸಂಪೂರ್ಣವಾಗಿ ಓದಿ

ಈ ವಚನವನ್ನು ಇತರ ಭಾಷೆಗಳಲ್ಲಿಯೂ ಓದಿ

KJV தமிழ் తెలుగు हिन्दी