ಲೂಕನು 7:39

ಆಗ ಆತನನ್ನು ಕರೆದ ಫರಿಸಾಯನು ಅದನ್ನು ನೋಡಿ ತನ್ನೊಳಗೆ--ಈ ಮನುಷ್ಯನು ಒಬ್ಬ ಪ್ರವಾದಿಯಾಗಿದ್ದರೆ ತನ್ನನ್ನು ಮುಟ್ಟುತ್ತಿದ್ದವಳು ಯಾರು ಎಂದೂ ಎಂಥತರವಾದ ಹೆಂಗಸು ಎಂದೂ ತಿಳಿದುಕೊಳ್ಳುತ್ತಿದ್ದನು; ಯಾಕಂದರೆ ಅವಳು ಒಬ್ಬ ಪಾಪಿ ಎಂದು ತನ್ನೊಳಗೆ ಅಂದು ಕೊಂಡನು.

ಸಂದರ್ಭದೊಂದಿಗೆ ಓದಿ · ಲೂಕನು 7

37ಆಗ ಇಗೋ, ಆ ಪಟ್ಟಣದಲ್ಲಿದ್ದ ಫರಿಸಾಯನ ಮನೆಯಲ್ಲಿ ಯೇಸು ಊಟಕ್ಕೆ ಕೂತು ಕೊಂಡಿದ್ದಾನೆಂದು ಒಬ್ಬ ಪಾಪಿಯಾದ ಸ್ತ್ರೀಯು ತಿಳಿದು ಸುಗಂಧತೈಲದ ಭರಣಿಯನ್ನು ತಂದು

38ಆತನ ಹಿಂದೆ ಪಾದಗಳ ಬಳಿಯಲ್ಲಿ ನಿಂತು ಅಳುತ್ತಾ ಆತನ ಪಾದ ಗಳನ್ನು ಕಣ್ಣೀರಿನಿಂದ ತೊಳೆಯಲಾರಂಭಿಸಿ ಅವುಗಳನ್ನು ತನ್ನ ತಲೇಕೂದಲಿನಿಂದ ಒರಸಿ ಆತನ ಪಾದಗಳಿಗೆ ಮುದ್ದಿಟ್ಟು ಆ ತೈಲವನ್ನು ಹಚ್ಚಿದಳು.

39ಆಗ ಆತನನ್ನು ಕರೆದ ಫರಿಸಾಯನು ಅದನ್ನು ನೋಡಿ ತನ್ನೊಳಗೆ--ಈ ಮನುಷ್ಯನು ಒಬ್ಬ ಪ್ರವಾದಿಯಾಗಿದ್ದರೆ ತನ್ನನ್ನು ಮುಟ್ಟುತ್ತಿದ್ದವಳು ಯಾರು ಎಂದೂ ಎಂಥತರವಾದ ಹೆಂಗಸು ಎಂದೂ ತಿಳಿದುಕೊಳ್ಳುತ್ತಿದ್ದನು; ಯಾಕಂದರೆ ಅವಳು ಒಬ್ಬ ಪಾಪಿ ಎಂದು ತನ್ನೊಳಗೆ ಅಂದು ಕೊಂಡನು.

40ಆಗ ಯೇಸು ಅವನಿಗೆ--ಸೀಮೋ ನನೇ, ನಾನು ನಿನಗೆ ಹೇಳುವದಕ್ಕೆ ಒಂದು ಮಾತು ಇದೆ ಅನ್ನಲು ಅವನು ಆತನಿಗೆ--ಗುರುವೇ, ಹೇಳು ಅಂದಾಗ, ಆತನು--

41ಸಾಲಕೊಡುವ ಒಬ್ಬನಿಗೆ ಇಬ್ಬರು ಸಾಲಗಾರರಿದ್ದರು; ಒಬ್ಬನು ಐದುನೂರು ನಾಣ್ಯಗಳನ್ನೂ ಮತ್ತೊಬ್ಬನು ಐವತ್ತು ನಾಣ್ಯಗಳನ್ನೂ ಕೊಡಬೇಕಾಗಿತ್ತು.

ಲೂಕನು 7 ಸಂಪೂರ್ಣವಾಗಿ ಓದಿ

ಈ ವಚನವನ್ನು ಇತರ ಭಾಷೆಗಳಲ್ಲಿಯೂ ಓದಿ

KJV தமிழ் తెలుగు हिन्दी