ಲೂಕನು 7:37

ಆಗ ಇಗೋ, ಆ ಪಟ್ಟಣದಲ್ಲಿದ್ದ ಫರಿಸಾಯನ ಮನೆಯಲ್ಲಿ ಯೇಸು ಊಟಕ್ಕೆ ಕೂತು ಕೊಂಡಿದ್ದಾನೆಂದು ಒಬ್ಬ ಪಾಪಿಯಾದ ಸ್ತ್ರೀಯು ತಿಳಿದು ಸುಗಂಧತೈಲದ ಭರಣಿಯನ್ನು ತಂದು

ಸಂದರ್ಭದೊಂದಿಗೆ ಓದಿ · ಲೂಕನು 7

35ಆದರೆ ಜ್ಞಾನವು ತನ್ನ ಎಲ್ಲಾ ಮಕ್ಕಳಿಂದ ನೀತಿ ನಿರ್ಣಯಪಡೆಯುವದು ಅಂದನು.

36ಆಗ ಫರಿಸಾಯರಲ್ಲಿ ಒಬ್ಬನು ತನ್ನೊಂದಿಗೆ ಊಟ ಮಾಡ ಬೇಕೆಂದು ಅಪೇಕ್ಷಿಸಿದನು;ಆಗ ಆತನು ಆ ಫರಿಸಾ ಯನ ಮನೆಯೊಳಕ್ಕೆ ಹೋಗಿ ಊಟಕ್ಕೆ ಕೂತು ಕೊಂಡನು.

37ಆಗ ಇಗೋ, ಆ ಪಟ್ಟಣದಲ್ಲಿದ್ದ ಫರಿಸಾಯನ ಮನೆಯಲ್ಲಿ ಯೇಸು ಊಟಕ್ಕೆ ಕೂತು ಕೊಂಡಿದ್ದಾನೆಂದು ಒಬ್ಬ ಪಾಪಿಯಾದ ಸ್ತ್ರೀಯು ತಿಳಿದು ಸುಗಂಧತೈಲದ ಭರಣಿಯನ್ನು ತಂದು

38ಆತನ ಹಿಂದೆ ಪಾದಗಳ ಬಳಿಯಲ್ಲಿ ನಿಂತು ಅಳುತ್ತಾ ಆತನ ಪಾದ ಗಳನ್ನು ಕಣ್ಣೀರಿನಿಂದ ತೊಳೆಯಲಾರಂಭಿಸಿ ಅವುಗಳನ್ನು ತನ್ನ ತಲೇಕೂದಲಿನಿಂದ ಒರಸಿ ಆತನ ಪಾದಗಳಿಗೆ ಮುದ್ದಿಟ್ಟು ಆ ತೈಲವನ್ನು ಹಚ್ಚಿದಳು.

39ಆಗ ಆತನನ್ನು ಕರೆದ ಫರಿಸಾಯನು ಅದನ್ನು ನೋಡಿ ತನ್ನೊಳಗೆ--ಈ ಮನುಷ್ಯನು ಒಬ್ಬ ಪ್ರವಾದಿಯಾಗಿದ್ದರೆ ತನ್ನನ್ನು ಮುಟ್ಟುತ್ತಿದ್ದವಳು ಯಾರು ಎಂದೂ ಎಂಥತರವಾದ ಹೆಂಗಸು ಎಂದೂ ತಿಳಿದುಕೊಳ್ಳುತ್ತಿದ್ದನು; ಯಾಕಂದರೆ ಅವಳು ಒಬ್ಬ ಪಾಪಿ ಎಂದು ತನ್ನೊಳಗೆ ಅಂದು ಕೊಂಡನು.

ಲೂಕನು 7 ಸಂಪೂರ್ಣವಾಗಿ ಓದಿ

ಈ ವಚನವನ್ನು ಇತರ ಭಾಷೆಗಳಲ್ಲಿಯೂ ಓದಿ

KJV தமிழ் తెలుగు हिन्दी