ಮಾರ್ಕನು 11:14

ಯೇಸು ಅದಕ್ಕೆ--ಇನ್ನೆಂದಿಗೂ ಯಾವನೂ ನಿನ್ನಿಂದ ಹಣ್ಣನ್ನು ತಿನ್ನದಿರಲಿ ಅಂದನು. ಅದನ್ನು ಆತನ ಶಿಷ್ಯರು ಕೇಳಿಸಿಕೊಂಡರು.

ಸಂದರ್ಭದೊಂದಿಗೆ ಓದಿ · ಮಾರ್ಕನು 11

12ಮರುದಿವಸ ಅವರು ಬೇಥಾನ್ಯದಿಂದ ಬರುತ್ತಿ ದ್ದಾಗ ಆತನು ಹಸಿದಿದ್ದನು;

13ಆತನು ಎಲೆಗಳಿದ್ದ ಒಂದು ಅಂಜೂರದ ಮರವನ್ನು ದೂರದಿಂದ ನೋಡಿ ಒಂದು ವೇಳೆ ತನಗೆ ಅದರಲ್ಲಿ ಏನಾದರೂ ಸಿಕ್ಕೀತೆಂದು ಬಂದನು; ಆದರೆ ಆತನು ಅದರ ಬಳಿಗೆ ಬಂದಾಗ ಎಲೆಗಳನ್ನೇ ಹೊರತು ಮತ್ತೇನೂ ಕಾಣಲಿಲ್ಲ; ಯಾಕಂ ದರೆ ಅದು ಅಂಜೂರ ಫಲದ ಕಾಲವಾಗಿರಲಿಲ್ಲ.

14ಯೇಸು ಅದಕ್ಕೆ--ಇನ್ನೆಂದಿಗೂ ಯಾವನೂ ನಿನ್ನಿಂದ ಹಣ್ಣನ್ನು ತಿನ್ನದಿರಲಿ ಅಂದನು. ಅದನ್ನು ಆತನ ಶಿಷ್ಯರು ಕೇಳಿಸಿಕೊಂಡರು.

15ಆಗ ಅವರು ಯೆರೂಸಲೇಮಿಗೆ ಬಂದರು; ಮತ್ತು ಯೇಸು ದೇವಾಲಯದೊಳಕ್ಕೆ ಹೋಗಿ ಅಲ್ಲಿ ಮಾರುತ್ತಿದ್ದವರನ್ನೂ ಕೊಂಡು ಕೊಳ್ಳುತ್ತಿದ್ದವರನ್ನೂ ಹೊರಗೆ ಹಾಕಲಾರಂಭಿಸಿ ಹಣ ಬದಲಾಯಿಸುವವರ ಮೇಜುಗಳನ್ನೂ ಪಾರಿವಾಳಗಳನ್ನು ಮಾರುತ್ತಿದ್ದವರ ಪೀಠಗಳನ್ನೂ ಕೆಡವಿಹಾಕಿದನು.

16ಯಾವನೂ ದೇವಾಲಯದ ಮಾರ್ಗದಿಂದ ಯಾವ ಪಾತ್ರೆಯ ನ್ನಾದರೂ ತಕ್ಕೊಂಡು ಹೋಗಗೊಡಿಸಲಿಲ್ಲ.

ಮಾರ್ಕನು 11 ಸಂಪೂರ್ಣವಾಗಿ ಓದಿ

ಈ ವಚನವನ್ನು ಇತರ ಭಾಷೆಗಳಲ್ಲಿಯೂ ಓದಿ

KJV தமிழ் తెలుగు हिन्दी