ಮಾರ್ಕನು 11:16

ಯಾವನೂ ದೇವಾಲಯದ ಮಾರ್ಗದಿಂದ ಯಾವ ಪಾತ್ರೆಯ ನ್ನಾದರೂ ತಕ್ಕೊಂಡು ಹೋಗಗೊಡಿಸಲಿಲ್ಲ.

ಸಂದರ್ಭದೊಂದಿಗೆ ಓದಿ · ಮಾರ್ಕನು 11

14ಯೇಸು ಅದಕ್ಕೆ--ಇನ್ನೆಂದಿಗೂ ಯಾವನೂ ನಿನ್ನಿಂದ ಹಣ್ಣನ್ನು ತಿನ್ನದಿರಲಿ ಅಂದನು. ಅದನ್ನು ಆತನ ಶಿಷ್ಯರು ಕೇಳಿಸಿಕೊಂಡರು.

15ಆಗ ಅವರು ಯೆರೂಸಲೇಮಿಗೆ ಬಂದರು; ಮತ್ತು ಯೇಸು ದೇವಾಲಯದೊಳಕ್ಕೆ ಹೋಗಿ ಅಲ್ಲಿ ಮಾರುತ್ತಿದ್ದವರನ್ನೂ ಕೊಂಡು ಕೊಳ್ಳುತ್ತಿದ್ದವರನ್ನೂ ಹೊರಗೆ ಹಾಕಲಾರಂಭಿಸಿ ಹಣ ಬದಲಾಯಿಸುವವರ ಮೇಜುಗಳನ್ನೂ ಪಾರಿವಾಳಗಳನ್ನು ಮಾರುತ್ತಿದ್ದವರ ಪೀಠಗಳನ್ನೂ ಕೆಡವಿಹಾಕಿದನು.

16ಯಾವನೂ ದೇವಾಲಯದ ಮಾರ್ಗದಿಂದ ಯಾವ ಪಾತ್ರೆಯ ನ್ನಾದರೂ ತಕ್ಕೊಂಡು ಹೋಗಗೊಡಿಸಲಿಲ್ಲ.

17ಆತನು ಅವರಿಗೆ ಬೋಧಿಸುತ್ತಾ--ನನ್ನ ಮನೆಯು ಎಲ್ಲಾ ಜನಾಂಗಗಳವರಿಂದ ಪ್ರಾರ್ಥನೆಯ ಮನೆ ಎಂದು ಕರೆಯಲ್ಪಡುವದೆಂದು ಬರೆದಿಲ್ಲವೇ? ಆದರೆ ನೀವು ಅದನ್ನು ಕಳ್ಳರ ಗವಿಯನ್ನಾಗಿ ಮಾಡಿದ್ದೀರಿ ಎಂದು ಹೇಳಿದನು.

18ಆಗ ಶಾಸ್ತ್ರಿಗಳೂ ಪ್ರಧಾನಯಾಜಕರೂ ಅದನ್ನು ಕೇಳಿ ಆತನನ್ನು ಹೇಗೆ ಕೊಲ್ಲಬೇಕೆಂದು ಆಲೋಚಿಸಿದರು. ಆದರೆ ಜನರೆಲ್ಲರೂ ಆತನ ಬೋಧನೆಗೆ ಅತ್ಯಾಶ್ಚರ್ಯಪಟ್ಟದ್ದರಿಂದ ಅವರು ಆತನಿಗೆ ಭಯಪಟ್ಟರು.

ಮಾರ್ಕನು 11 ಸಂಪೂರ್ಣವಾಗಿ ಓದಿ

ಈ ವಚನವನ್ನು ಇತರ ಭಾಷೆಗಳಲ್ಲಿಯೂ ಓದಿ

KJV தமிழ் తెలుగు हिन्दी