ನಾವು ಅವರಿಗೆ ಇಟ್ಟ ಆಣೆಯ ನಿಮಿತ್ತ ಕೋಪವು ನಮ್ಮ ಮೇಲೆ ಬಾರದ ಹಾಗೆ ನಾವು ಅವರನ್ನು ಜೀವದಿಂದ ಇರಿಸಿ ಅವರಿಗೆ ಇದನ್ನು ಮಾಡುವೆವು.
18ಸಭೆಯ ಪ್ರಧಾನರು ಅವರಿಗೆ ಇಸ್ರಾಯೇಲಿನ ದೇವರಾದ ಕರ್ತನ ಮೇಲೆ ಆಣೆ ಇಟ್ಟದ್ದರಿಂದ ಇಸ್ರಾಯೇಲ್ ಮಕ್ಕಳು ಅವರನ್ನು ಸಂಹರಿಸಲಿಲ್ಲ. ಆದರೆ ಸಭೆಯವರೆಲ್ಲರೂ ಇಸ್ರಾಯೇ ಲ್ಯರ ಪ್ರಧಾನರಿಗೆ ವಿರೋಧವಾಗಿ ಗುಣುಗುಟ್ಟಿದರು.
19ಆಗ ಸಕಲ ಪ್ರಧಾನರು ಎಲ್ಲಾ ಸಭೆಗೆ--ನಾವು ಇಸ್ರಾಯೇಲಿನ ದೇವರಾದ ಕರ್ತನ ಮೇಲೆ ಅವರಿಗೆ ಆಣೆ ಇಟ್ಟೆವು; ಆದದರಿಂದ ಅವರನ್ನು ನಾವು ಮುಟ್ಟಕೂಡದು.
20ನಾವು ಅವರಿಗೆ ಇಟ್ಟ ಆಣೆಯ ನಿಮಿತ್ತ ಕೋಪವು ನಮ್ಮ ಮೇಲೆ ಬಾರದ ಹಾಗೆ ನಾವು ಅವರನ್ನು ಜೀವದಿಂದ ಇರಿಸಿ ಅವರಿಗೆ ಇದನ್ನು ಮಾಡುವೆವು.
21ಏನಂದರೆ, ಪ್ರಧಾನರಾದ ನಾವು ಅವರಿಗೆ ಹೇಳಿದ ಹಾಗೆಯೇ ಅವರನ್ನು ಜೀವದಿಂದ ಉಳಿಸಿ ಎಲ್ಲಾ ಸಭೆಗೆ ಕಟ್ಟಿಗೆ ಕಡಿಯುವವರಾಗಿಯೂ ನೀರು ತರುವವರಾಗಿಯೂ ಇರಲಿ ಎಂದು ಪ್ರಧಾನರು ಸಭೆಯವರ ಸಂಗಡ ಹೇಳಿದರು.
22ತರುವಾಯ ಯೆಹೋಶುವನು ಅವರನ್ನು ಕರಿಸಿ ಅವರಿಗೆ--ನಮ್ಮ ಮಧ್ಯದಲ್ಲಿ ವಾಸವಾಗಿರುವ ನೀವು ನಮ್ಮನ್ನು ಮೋಸ ಗೊಳಿಸಿ ನಾವು ನಿಮಗೆ ಬಹಳ ದೂರವಾಗಿರುವ ವರೆಂದು ನಮ್ಮ ಸಂಗಡ ಹೇಳಿದ್ದೇನು?
ಈ ವಚನವನ್ನು ಇತರ ಭಾಷೆಗಳಲ್ಲಿಯೂ ಓದಿ