ಯೆಹೋಶುವ 9:21

ಏನಂದರೆ, ಪ್ರಧಾನರಾದ ನಾವು ಅವರಿಗೆ ಹೇಳಿದ ಹಾಗೆಯೇ ಅವರನ್ನು ಜೀವದಿಂದ ಉಳಿಸಿ ಎಲ್ಲಾ ಸಭೆಗೆ ಕಟ್ಟಿಗೆ ಕಡಿಯುವವರಾಗಿಯೂ ನೀರು ತರುವವರಾಗಿಯೂ ಇರಲಿ ಎಂದು ಪ್ರಧಾನರು ಸಭೆಯವರ ಸಂಗಡ ಹೇಳಿದರು.

ಸಂದರ್ಭದೊಂದಿಗೆ ಓದಿ · ಯೆಹೋಶುವ 9

19ಆಗ ಸಕಲ ಪ್ರಧಾನರು ಎಲ್ಲಾ ಸಭೆಗೆ--ನಾವು ಇಸ್ರಾಯೇಲಿನ ದೇವರಾದ ಕರ್ತನ ಮೇಲೆ ಅವರಿಗೆ ಆಣೆ ಇಟ್ಟೆವು; ಆದದರಿಂದ ಅವರನ್ನು ನಾವು ಮುಟ್ಟಕೂಡದು.

20ನಾವು ಅವರಿಗೆ ಇಟ್ಟ ಆಣೆಯ ನಿಮಿತ್ತ ಕೋಪವು ನಮ್ಮ ಮೇಲೆ ಬಾರದ ಹಾಗೆ ನಾವು ಅವರನ್ನು ಜೀವದಿಂದ ಇರಿಸಿ ಅವರಿಗೆ ಇದನ್ನು ಮಾಡುವೆವು.

21ಏನಂದರೆ, ಪ್ರಧಾನರಾದ ನಾವು ಅವರಿಗೆ ಹೇಳಿದ ಹಾಗೆಯೇ ಅವರನ್ನು ಜೀವದಿಂದ ಉಳಿಸಿ ಎಲ್ಲಾ ಸಭೆಗೆ ಕಟ್ಟಿಗೆ ಕಡಿಯುವವರಾಗಿಯೂ ನೀರು ತರುವವರಾಗಿಯೂ ಇರಲಿ ಎಂದು ಪ್ರಧಾನರು ಸಭೆಯವರ ಸಂಗಡ ಹೇಳಿದರು.

22ತರುವಾಯ ಯೆಹೋಶುವನು ಅವರನ್ನು ಕರಿಸಿ ಅವರಿಗೆ--ನಮ್ಮ ಮಧ್ಯದಲ್ಲಿ ವಾಸವಾಗಿರುವ ನೀವು ನಮ್ಮನ್ನು ಮೋಸ ಗೊಳಿಸಿ ನಾವು ನಿಮಗೆ ಬಹಳ ದೂರವಾಗಿರುವ ವರೆಂದು ನಮ್ಮ ಸಂಗಡ ಹೇಳಿದ್ದೇನು?

23ಈಗ ನೀವು ಶಪಿಸಲ್ಪಟ್ಟವರು; ನಿಮ್ಮಲ್ಲಿ ಒಬ್ಬನಾದರೂ ದಾಸತ್ವ ದಿಂದ ಬಿಡಿಸಲ್ಪಡುವದಿಲ್ಲ; ನನ್ನ ದೇವರ ಮನೆಗೆ ಕಟ್ಟಿಗೆ ಕಡಿಯುವವರೂ ನೀರು ತರುವವರೂ ಆಗಿರು ವಿರಿ ಎಂದು ಹೇಳಿದನು.

ಯೆಹೋಶುವ 9 ಸಂಪೂರ್ಣವಾಗಿ ಓದಿ

ಈ ವಚನವನ್ನು ಇತರ ಭಾಷೆಗಳಲ್ಲಿಯೂ ಓದಿ

KJV தமிழ் తెలుగు हिन्दी