ಅವರ ಶತ್ರುಗಳು--ನಮ್ಮ ಕೈಗಳು ಉನ್ನತವಾಗಿವೆ ಎಂದೂ ಕರ್ತನು ಇವುಗಳನ್ನೆಲ್ಲಾ ಮಾಡಲಿಲ್ಲವೆಂದೂ ಅಂದುಕೊಂಡು ಗರ್ವದಿಂದ ನಡೆಯುವ ಶತ್ರುವಿನ ಕೋಪಕ್ಕೆ ಹೆದರದೆ ಹೋದೆನು.
25ಹೊರಗೆ ಕತ್ತಿಯೂ ಒಳಗೆ ಭಯವೂ ಪ್ರಾಯ ಸ್ಥನನ್ನೂ ಕನ್ನಿಕೆಯನ್ನೂ ನರೇಕೂದಲಿನವನ ಸಂಗಡ ಮೊಲೆ ಕೂಸನ್ನೂ ಸಂಹರಿಸುವವು.
26ನಾನು--ಅವರನ್ನು ಚದುರಿಸಿಬಿಡುವೆನೆಂದು ಹೇಳಿಕೊಂಡೆನು; ಅವರ ಜ್ಞಾಪಕವನ್ನು ಮನುಷ್ಯರಲ್ಲಿ ಇರದ ಹಾಗೆ ಮಾಡುವೆನು.
27ಅವರ ಶತ್ರುಗಳು--ನಮ್ಮ ಕೈಗಳು ಉನ್ನತವಾಗಿವೆ ಎಂದೂ ಕರ್ತನು ಇವುಗಳನ್ನೆಲ್ಲಾ ಮಾಡಲಿಲ್ಲವೆಂದೂ ಅಂದುಕೊಂಡು ಗರ್ವದಿಂದ ನಡೆಯುವ ಶತ್ರುವಿನ ಕೋಪಕ್ಕೆ ಹೆದರದೆ ಹೋದೆನು.
28ಅವರು ಆಲೋಚನೆಯಿಲ್ಲದ ಜನಾಂಗವೇ; ಅವರಲ್ಲಿ ಗ್ರಹಿಕೆ ಇಲ್ಲ.
29ಅವರು ಜ್ಞಾನವಂತರಾಗಿ ಇದರ ವಿಷಯ ಬುದ್ಧಿ ತಂದುಕೊಂಡು ತಮ್ಮ ಕಡೇಕಾಲಕ್ಕಾಗಿ ಗ್ರಹಿಕೆಯುಳ್ಳ ವರಾದರೆ ಎಷ್ಟೋ ಒಳ್ಳೇದು!
ಈ ವಚನವನ್ನು ಇತರ ಭಾಷೆಗಳಲ್ಲಿಯೂ ಓದಿ