ಧರ್ಮೋಪದೇಶಕಾಂಡ 32:25

ಹೊರಗೆ ಕತ್ತಿಯೂ ಒಳಗೆ ಭಯವೂ ಪ್ರಾಯ ಸ್ಥನನ್ನೂ ಕನ್ನಿಕೆಯನ್ನೂ ನರೇಕೂದಲಿನವನ ಸಂಗಡ ಮೊಲೆ ಕೂಸನ್ನೂ ಸಂಹರಿಸುವವು.

ಸಂದರ್ಭದೊಂದಿಗೆ ಓದಿ · ಧರ್ಮೋಪದೇಶಕಾಂಡ 32

23ನಾನು ಕೇಡುಗಳನ್ನು ಅವರ ಮೇಲೆ ಕೂಡಿಸಿ ಡುವೆನು; ನನ್ನ ಬಾಣಗಳನ್ನು ಅವರ ಮೇಲೆ ಎಸೆದು ತೀರಿಸುವೆನು.

24ಅವರು ಹಸಿವೆಯಿಂದ ಬಳಲಿಹೋಗುವರು, ಜ್ವಾಲೆಯಿಂದಲೂ ಕಠಿಣವಾಗಿ ಸಂಹರಿಸಲ್ಪಡುವರು. ಕಾಡುಮೃಗಗಳ ಹಲ್ಲನ್ನು, ಧೂಳಿನಲ್ಲಿರುವ ಹಾವು ಗಳ ವಿಷದ ಸಂಗಡ ಅವರಿಗೆ ವಿರೋಧವಾಗಿ ಕಳುಹಿಸುವೆನು.

25ಹೊರಗೆ ಕತ್ತಿಯೂ ಒಳಗೆ ಭಯವೂ ಪ್ರಾಯ ಸ್ಥನನ್ನೂ ಕನ್ನಿಕೆಯನ್ನೂ ನರೇಕೂದಲಿನವನ ಸಂಗಡ ಮೊಲೆ ಕೂಸನ್ನೂ ಸಂಹರಿಸುವವು.

26ನಾನು--ಅವರನ್ನು ಚದುರಿಸಿಬಿಡುವೆನೆಂದು ಹೇಳಿಕೊಂಡೆನು; ಅವರ ಜ್ಞಾಪಕವನ್ನು ಮನುಷ್ಯರಲ್ಲಿ ಇರದ ಹಾಗೆ ಮಾಡುವೆನು.

27ಅವರ ಶತ್ರುಗಳು--ನಮ್ಮ ಕೈಗಳು ಉನ್ನತವಾಗಿವೆ ಎಂದೂ ಕರ್ತನು ಇವುಗಳನ್ನೆಲ್ಲಾ ಮಾಡಲಿಲ್ಲವೆಂದೂ ಅಂದುಕೊಂಡು ಗರ್ವದಿಂದ ನಡೆಯುವ ಶತ್ರುವಿನ ಕೋಪಕ್ಕೆ ಹೆದರದೆ ಹೋದೆನು.

ಧರ್ಮೋಪದೇಶಕಾಂಡ 32 ಸಂಪೂರ್ಣವಾಗಿ ಓದಿ

ಈ ವಚನವನ್ನು ಇತರ ಭಾಷೆಗಳಲ್ಲಿಯೂ ಓದಿ

KJV தமிழ் తెలుగు हिन्दी