೧ ಪೂರ್ವಕಾಲವೃತ್ತಾಂತ 29:28

ಅವನು ದಿನಗಳು ತುಂಬಿದವನಾಗಿ ಐಶ್ವರ್ಯದಿಂದಲೂ ಘನದಿಂದಲೂ ತುಂಬಲ್ಪಟ್ಟು ಒಳ್ಳೇ ವೃದ್ಧಪ್ರಾಯದಲ್ಲಿ ಸತ್ತುಹೋದನು. ಅವನಿಗೆ ಬದಲಾಗಿ ಅವನ ಮಗನಾದ ಸೊಲೊಮೋನನು ಆಳಿದನು.

ಸಂದರ್ಭದೊಂದಿಗೆ ಓದಿ · ೧ ಪೂರ್ವಕಾಲವೃತ್ತಾಂತ 29

26ಈ ಪ್ರಕಾರ ಇಷಯನ ಮಗನಾದ ದಾವೀದನು ಸಮಸ್ತ ಇಸ್ರಾಯೇಲಿನ ಮೇಲೆ ಆಳಿದನು.

27ಅವನು ಇಸ್ರಾಯೇಲಿನ ಮೇಲೆ ಆಳಿದ ದಿವಸಗಳು ನಾಲ್ವತ್ತು ವರುಷ. ಏಳು ವರುಷ ಹೆಬ್ರೋನಿನಲ್ಲಿ ಆಳಿದನು; ಮೂವತ್ತಮೂರು ವರುಷ ಯೆರೂಸಲೇಮಿನಲ್ಲಿ ಆಳಿದನು.

28ಅವನು ದಿನಗಳು ತುಂಬಿದವನಾಗಿ ಐಶ್ವರ್ಯದಿಂದಲೂ ಘನದಿಂದಲೂ ತುಂಬಲ್ಪಟ್ಟು ಒಳ್ಳೇ ವೃದ್ಧಪ್ರಾಯದಲ್ಲಿ ಸತ್ತುಹೋದನು. ಅವನಿಗೆ ಬದಲಾಗಿ ಅವನ ಮಗನಾದ ಸೊಲೊಮೋನನು ಆಳಿದನು.

29ಆದರೆ ಅರಸನಾದ ದಾವೀದನ ಕ್ರಿಯೆಗಳು ಮೊದಲಿನಿಂದ ಕೊನೆಯ ವರೆಗೆ ಅವನ ಸಮಸ್ತ ಆಳಿಕೆಯೂ ಅವನ ಪರಾಕ್ರಮವೂ ಅವನ ಮೇಲೆಯೂ ಇಸ್ರಾಯೇಲಿನ ಮೇಲೆಯೂ ದೇಶಗಳ ಸಮಸ್ತ ರಾಜ್ಯಗಳ ಮೇಲೆಯೂ ಗತಿಸಿದ ಕಾಲಗಳೂ

30ಇಗೋ, ದರ್ಶಿಯಾದ ಸಮುವೇಲನ ಪುಸ್ತಕ ದಲ್ಲಿಯೂ ಪ್ರವಾದಿಯಾದ ನಾತಾನನ ಪುಸ್ತಕ ದಲ್ಲಿಯೂ ದರ್ಶಿಯಾದ ಗಾದನ ಪುಸ್ತಕದಲ್ಲಿಯೂ ಬರೆಯಲ್ಪಟ್ಟಿವೆ.

೧ ಪೂರ್ವಕಾಲವೃತ್ತಾಂತ 29 ಸಂಪೂರ್ಣವಾಗಿ ಓದಿ

ಈ ವಚನವನ್ನು ಇತರ ಭಾಷೆಗಳಲ್ಲಿಯೂ ಓದಿ

KJV தமிழ் తెలుగు हिन्दी