ಈ ಪ್ರಕಾರ ಇಷಯನ ಮಗನಾದ ದಾವೀದನು ಸಮಸ್ತ ಇಸ್ರಾಯೇಲಿನ ಮೇಲೆ ಆಳಿದನು.
24ಎಲ್ಲಾ ಪ್ರಧಾನರೂ ಪರಾಕ್ರಮಶಾಲಿಗಳೂ ಅರಸನಾದ ದಾವೀದನ ಸಮಸ್ತ ಕುಮಾರರೂ ಅರಸನಾದ ಸೊಲೊ ಮೋನನ ಕೆಳಗೆ ಒಪ್ಪಿಸಿಕೊಟ್ಟರು.
25ಇದಲ್ಲದೆ ಕರ್ತನು ಸಮಸ್ತ ಇಸ್ರಾಯೇಲಿನ ಸಮ್ಮುಖದಲ್ಲಿ ಸೊಲೊಮೋನನನ್ನು ಅಧಿಕವಾಗಿ ಹೆಚ್ಚಿಸಿ ಇಸ್ರಾಯೇ ಲಿನಲ್ಲಿ ಅವನಿಗಿಂತ ಮುಂಚೆ ಇದ್ದ ಯಾವ ಅರಸ ನಿಗಾದರೂ ಇಲ್ಲದಂಥ ರಾಜ್ಯದ ಮಹಿಮೆಯನ್ನು ಅವನಿಗೆ ಕೊಟ್ಟನು.
26ಈ ಪ್ರಕಾರ ಇಷಯನ ಮಗನಾದ ದಾವೀದನು ಸಮಸ್ತ ಇಸ್ರಾಯೇಲಿನ ಮೇಲೆ ಆಳಿದನು.
27ಅವನು ಇಸ್ರಾಯೇಲಿನ ಮೇಲೆ ಆಳಿದ ದಿವಸಗಳು ನಾಲ್ವತ್ತು ವರುಷ. ಏಳು ವರುಷ ಹೆಬ್ರೋನಿನಲ್ಲಿ ಆಳಿದನು; ಮೂವತ್ತಮೂರು ವರುಷ ಯೆರೂಸಲೇಮಿನಲ್ಲಿ ಆಳಿದನು.
28ಅವನು ದಿನಗಳು ತುಂಬಿದವನಾಗಿ ಐಶ್ವರ್ಯದಿಂದಲೂ ಘನದಿಂದಲೂ ತುಂಬಲ್ಪಟ್ಟು ಒಳ್ಳೇ ವೃದ್ಧಪ್ರಾಯದಲ್ಲಿ ಸತ್ತುಹೋದನು. ಅವನಿಗೆ ಬದಲಾಗಿ ಅವನ ಮಗನಾದ ಸೊಲೊಮೋನನು ಆಳಿದನು.
ಈ ವಚನವನ್ನು ಇತರ ಭಾಷೆಗಳಲ್ಲಿಯೂ ಓದಿ