ಯೆಹೋಶುವ 11:20

ಅವರು ಯುದ್ಧಮಾಡಲು ಇಸ್ರಾಯೇಲಿಗೆ ಎದುರಾಗಿ ಬರುವ ಹಾಗೆ ಅವರ ಹೃದಯವನ್ನು ಕಠಿಣಮಾಡಿ ಅವರನ್ನು ಸಂಪೂರ್ಣ ನಾಶಮಾಡುವ ಹಾಗೆ ಕರ್ತನು ಮೋಶೆಗೆ ಆಜ್ಞಾಪಿಸಿದ ಪ್ರಕಾರ ಅವರಿಗೆ ದಯೆತೋರಿಸದೆ ಅವರನ್ನು ನಾಶಮಾಡುವ ಹಾಗೆ ಕರ್ತನಿಂದ ಅಪ್ಪಣೆ ಆಗಿತ್ತು.

ಸಂದರ್ಭದೊಂದಿಗೆ ಓದಿ · ಯೆಹೋಶುವ 11

18ಯೆಹೋಶುವನು ಬಹಳಕಾಲ ಈ ಅರಸುಗಳೆಲ್ಲರ ಸಂಗಡ ಯುದ್ಧಮಾಡುತ್ತಿದ್ದನು.

19ಗಿಬ್ಯೋನಿನ ನಿವಾಸಿಗಳಾದ ಹಿವ್ವಿಯರ ಹೊರತಾಗಿ ಇಸ್ರಾಯೇಲ್‌ ಮಕ್ಕಳ ಸಂಗಡ ಸಮಾಧಾನಮಾಡಿಕೊಂಡ ಬೇರೆ ಒಂದು ಪಟ್ಟಣವಾದರೂ ಇರಲಿಲ್ಲ; ಅವರು ಬೇರೆ ಎಲ್ಲವು ಗಳನ್ನು ಯುದ್ಧಮಾಡಿ ತೆಗೆದುಕೊಂಡರು.

20ಅವರು ಯುದ್ಧಮಾಡಲು ಇಸ್ರಾಯೇಲಿಗೆ ಎದುರಾಗಿ ಬರುವ ಹಾಗೆ ಅವರ ಹೃದಯವನ್ನು ಕಠಿಣಮಾಡಿ ಅವರನ್ನು ಸಂಪೂರ್ಣ ನಾಶಮಾಡುವ ಹಾಗೆ ಕರ್ತನು ಮೋಶೆಗೆ ಆಜ್ಞಾಪಿಸಿದ ಪ್ರಕಾರ ಅವರಿಗೆ ದಯೆತೋರಿಸದೆ ಅವರನ್ನು ನಾಶಮಾಡುವ ಹಾಗೆ ಕರ್ತನಿಂದ ಅಪ್ಪಣೆ ಆಗಿತ್ತು.

21ಆ ಕಾಲದಲ್ಲಿ ಯೆಹೋಶುವನು ಬಂದು ಬೆಟ್ಟದ ದೇಶವಾದ ಹೆಬ್ರೋನಿನಲ್ಲಿಯೂ ದೆಬೀರಿನಲ್ಲಿಯೂ ಅನಾಬಿನಲ್ಲಿಯೂ ಯೂದನ ಸಕಲ ಬೆಟ್ಟಗಳಲ್ಲಿಯೂ ಇಸ್ರಾಯೇಲಿನ ಸಕಲ ಬೆಟ್ಟಗಳಲ್ಲಿಯೂ ಇದ್ದ ಅನಾಕ್ಯ ರನ್ನು ಕಡಿದುಬಿಟ್ಟು ಅವರನ್ನೂ ಅವರ ಪಟ್ಟಣ ಗಳನ್ನೂ ಸಂಪೂರ್ಣ ನಾಶಮಾಡಿದನು.

22ಅನಾಕ್ಯರು ಇಸ್ರಾಯೇಲ್‌ ಮಕ್ಕಳ ದೇಶದಲ್ಲಿ ಒಬ್ಬನೂ ಉಳಿಯ ಲಿಲ್ಲ. ಗಾಜಾದಲ್ಲಿಯೂ ಗತ್‌ನಲ್ಲಿಯೂ ಅಷ್ಡೋದಿ ನಲ್ಲಿಯೂ ಮಾತ್ರ ಉಳಿದರು.

ಯೆಹೋಶುವ 11 ಸಂಪೂರ್ಣವಾಗಿ ಓದಿ

ಈ ವಚನವನ್ನು ಇತರ ಭಾಷೆಗಳಲ್ಲಿಯೂ ಓದಿ

KJV தமிழ் తెలుగు हिन्दी