ಯೆಹೋಶುವನು ಬಹಳಕಾಲ ಈ ಅರಸುಗಳೆಲ್ಲರ ಸಂಗಡ ಯುದ್ಧಮಾಡುತ್ತಿದ್ದನು.
16ಈ ಪ್ರಕಾರ ಯೆಹೋಶುವನು ಸೇಯಾರಿಗೆ ಏರಿ ಹೋಗುವ ಹಾಲಾಕ್ ಬೆಟ್ಟ ಮೊದಲುಗೊಂಡು ಬಾಲ್ಗಾದಿನ ಮಟ್ಟಿಗೂ ಇರುವ ಲೆಬನೋನಿನ ತಗ್ಗಿನಲ್ಲಿ ಹೆರ್ಮೋನಿನ ಬೆಟ್ಟದ ಕೆಳಗಿರುವ ಎಲ್ಲಾ ದೇಶವನ್ನೂ ಬೆಟ್ಟಗಳನ್ನೂ ದಕ್ಷಿಣ ದೇಶವೆಲ್ಲವನ್ನೂ ಎಲ್ಲಾ
17ಗೋಷೆನ್ ಸೀಮೆಯನ್ನೂ ಅದರ ತಗ್ಗನ್ನೂ ಬೈಲನ್ನೂ ಇಸ್ರಾಯೆಲ್ ಬೆಟ್ಟವನ್ನೂ ಅದರ ತಗ್ಗನ್ನೂ ತೆಗೆದುಕೊಂಡು ಅವುಗಳ ಅರಸುಗಳೆಲ್ಲರನ್ನೂ ಹಿಡಿದು ಅವರನ್ನು ಹೊಡೆದು ಕೊಂದುಹಾಕಿದನು.
18ಯೆಹೋಶುವನು ಬಹಳಕಾಲ ಈ ಅರಸುಗಳೆಲ್ಲರ ಸಂಗಡ ಯುದ್ಧಮಾಡುತ್ತಿದ್ದನು.
19ಗಿಬ್ಯೋನಿನ ನಿವಾಸಿಗಳಾದ ಹಿವ್ವಿಯರ ಹೊರತಾಗಿ ಇಸ್ರಾಯೇಲ್ ಮಕ್ಕಳ ಸಂಗಡ ಸಮಾಧಾನಮಾಡಿಕೊಂಡ ಬೇರೆ ಒಂದು ಪಟ್ಟಣವಾದರೂ ಇರಲಿಲ್ಲ; ಅವರು ಬೇರೆ ಎಲ್ಲವು ಗಳನ್ನು ಯುದ್ಧಮಾಡಿ ತೆಗೆದುಕೊಂಡರು.
20ಅವರು ಯುದ್ಧಮಾಡಲು ಇಸ್ರಾಯೇಲಿಗೆ ಎದುರಾಗಿ ಬರುವ ಹಾಗೆ ಅವರ ಹೃದಯವನ್ನು ಕಠಿಣಮಾಡಿ ಅವರನ್ನು ಸಂಪೂರ್ಣ ನಾಶಮಾಡುವ ಹಾಗೆ ಕರ್ತನು ಮೋಶೆಗೆ ಆಜ್ಞಾಪಿಸಿದ ಪ್ರಕಾರ ಅವರಿಗೆ ದಯೆತೋರಿಸದೆ ಅವರನ್ನು ನಾಶಮಾಡುವ ಹಾಗೆ ಕರ್ತನಿಂದ ಅಪ್ಪಣೆ ಆಗಿತ್ತು.
ಈ ವಚನವನ್ನು ಇತರ ಭಾಷೆಗಳಲ್ಲಿಯೂ ಓದಿ