ಅಹಾಬನ ಮನೆಯನ್ನು ನೆಬಾಟನ ಮಗನಾದ ಯಾರೊಬ್ಬಾಮನ ಮನೆಯ ಹಾಗೆಯೂ ಅಹೀಯನ ಮಗನಾದ ಬಾಷನ ಮನೆಯ ಹಾಗೆಯೂ ಮಾಡುವೆನು.
7ಪ್ರವಾದಿಗಳಾದ ನನ್ನ ಸೇವಕರ ರಕ್ತ ಕ್ಕೋಸ್ಕರವೂ ಕರ್ತನ ಎಲ್ಲಾ ಸೇವಕರ ರಕ್ತಕ್ಕೋಸ್ಕ ರವೂ ಈಜೆಬೆಲಳಿಗೆ ಮುಯ್ಯಿಗೆ ಮುಯ್ಯಿ ತೀರಿ ಸುವ ಹಾಗೆಯೂ ನೀನು ನಿನ್ನ ಯಜಮಾನ ನಾದ ಅಹಾಬನ ಮನೆಯವರನ್ನು ಸಂಹರಿಸಬೇಕು.
8ಅಹಾಬನ ಮನೆಯೆಲ್ಲಾ ನಾಶವಾಗಿ ಹೋಗುವದು. ಅಹಾಬನ ಸಂತಾನದ ಗಂಡಸರನ್ನೂ ಇಸ್ರಾಯೇಲಿ ನಲ್ಲಿ ಉಳಿದು ಬಚ್ಚಿಡಲ್ಪಟ್ಟವನನ್ನೂ ನಾನು ಕಡಿದು ಬಿಡುವೆನು.
9ಅಹಾಬನ ಮನೆಯನ್ನು ನೆಬಾಟನ ಮಗನಾದ ಯಾರೊಬ್ಬಾಮನ ಮನೆಯ ಹಾಗೆಯೂ ಅಹೀಯನ ಮಗನಾದ ಬಾಷನ ಮನೆಯ ಹಾಗೆಯೂ ಮಾಡುವೆನು.
10ಇದಲ್ಲದೆ ಇಜ್ರೇಲಿನ ಪಾಲಿನಲ್ಲಿ ನಾಯಿಗಳು ಈಜೆಬೆಲಳನ್ನು ತಿನ್ನುವವು; ಅವಳನ್ನು ಹೂಣಿಡಲು ಯಾವನೂ ಇರುವದಿಲ್ಲ ಎಂದು ಹೇಳಿ ಬಾಗಲನ್ನು ತೆರೆದು ಓಡಿಹೋದನು.
11ಆಗ ಯೇಹುವು ತನ್ನ ಯಜಮಾನನ ಸೇವಕರ ಬಳಿಗೆ ಹೊರಟು ಬಂದನು. ಅವರು ಅವನಿಗೆ ಎಲ್ಲವೂ ಕ್ಷೇಮವೋ? ಈ ಹುಚ್ಚನು ನಿನ್ನ ಬಳಿಗೆ ಬಂದದ್ದೇನು ಅಂದರು. ಅವನು ಅವರಿಗೆ--ಆ ಮನುಷ್ಯನನ್ನೂ ಅವನ ಮಾತನ್ನೂ ನೀವು ಬಲ್ಲಿರಿ ಅಂದನು.
ಈ ವಚನವನ್ನು ಇತರ ಭಾಷೆಗಳಲ್ಲಿಯೂ ಓದಿ