೨ ಅರಸುಗಳು 9:10

ಇದಲ್ಲದೆ ಇಜ್ರೇಲಿನ ಪಾಲಿನಲ್ಲಿ ನಾಯಿಗಳು ಈಜೆಬೆಲಳನ್ನು ತಿನ್ನುವವು; ಅವಳನ್ನು ಹೂಣಿಡಲು ಯಾವನೂ ಇರುವದಿಲ್ಲ ಎಂದು ಹೇಳಿ ಬಾಗಲನ್ನು ತೆರೆದು ಓಡಿಹೋದನು.

ಸಂದರ್ಭದೊಂದಿಗೆ ಓದಿ · ೨ ಅರಸುಗಳು 9

8ಅಹಾಬನ ಮನೆಯೆಲ್ಲಾ ನಾಶವಾಗಿ ಹೋಗುವದು. ಅಹಾಬನ ಸಂತಾನದ ಗಂಡಸರನ್ನೂ ಇಸ್ರಾಯೇಲಿ ನಲ್ಲಿ ಉಳಿದು ಬಚ್ಚಿಡಲ್ಪಟ್ಟವನನ್ನೂ ನಾನು ಕಡಿದು ಬಿಡುವೆನು.

9ಅಹಾಬನ ಮನೆಯನ್ನು ನೆಬಾಟನ ಮಗನಾದ ಯಾರೊಬ್ಬಾಮನ ಮನೆಯ ಹಾಗೆಯೂ ಅಹೀಯನ ಮಗನಾದ ಬಾಷನ ಮನೆಯ ಹಾಗೆಯೂ ಮಾಡುವೆನು.

10ಇದಲ್ಲದೆ ಇಜ್ರೇಲಿನ ಪಾಲಿನಲ್ಲಿ ನಾಯಿಗಳು ಈಜೆಬೆಲಳನ್ನು ತಿನ್ನುವವು; ಅವಳನ್ನು ಹೂಣಿಡಲು ಯಾವನೂ ಇರುವದಿಲ್ಲ ಎಂದು ಹೇಳಿ ಬಾಗಲನ್ನು ತೆರೆದು ಓಡಿಹೋದನು.

11ಆಗ ಯೇಹುವು ತನ್ನ ಯಜಮಾನನ ಸೇವಕರ ಬಳಿಗೆ ಹೊರಟು ಬಂದನು. ಅವರು ಅವನಿಗೆ ಎಲ್ಲವೂ ಕ್ಷೇಮವೋ? ಈ ಹುಚ್ಚನು ನಿನ್ನ ಬಳಿಗೆ ಬಂದದ್ದೇನು ಅಂದರು. ಅವನು ಅವರಿಗೆ--ಆ ಮನುಷ್ಯನನ್ನೂ ಅವನ ಮಾತನ್ನೂ ನೀವು ಬಲ್ಲಿರಿ ಅಂದನು.

12ಅದಕ್ಕವರು--ಅದು ಸುಳ್ಳು, ದಯಮಾಡಿ ನಮಗೆ ತಿಳಿಸು ಅಂದರು. ಆದದರಿಂದ ಅವನು--ಇಸ್ರಾ ಯೇಲಿನ ಮೇಲೆ ಅರಸನಾಗಿರಲು ನಿನ್ನನ್ನು ಅಭಿಷೇಕಿ ಸಿದ್ದೇನೆಂಬದಾಗಿ ಕರ್ತನು ಹೇಳುತ್ತಾನೆಂದು ಹೀಗೆ ನನಗೆ ಹೇಳಿದನು ಅಂದನು.

೨ ಅರಸುಗಳು 9 ಸಂಪೂರ್ಣವಾಗಿ ಓದಿ

ಈ ವಚನವನ್ನು ಇತರ ಭಾಷೆಗಳಲ್ಲಿಯೂ ಓದಿ

KJV தமிழ் తెలుగు हिन्दी