ನನ್ನ ಮಾತುಗಳು ನನ್ನ ಹೃದಯದ ಯಥಾರ್ಥತೆಯಿಂದ ಇರುವವು ಮತ್ತು ನನ್ನ ತುಟಿಗಳು ವಿವೇಕವನ್ನು ಸ್ಪಷ್ಟವಾಗಿ ಉಚ್ಚರಿಸುತ್ತವೆ.
1ಆದದರಿಂದ ಯೋಬನೇ, ನನ್ನ ಮಾತುಗಳನ್ನು ಕೇಳು; ನನ್ನ ಎಲ್ಲಾ ನುಡಿಗಳಿಗೆ ಕಿವಿಗೊಡು ಎಂದು ಕೇಳಿಕೊಳ್ಳುತ್ತೇನೆ.
2ಇಗೋ, ಈಗ ನನ್ನ ಬಾಯನ್ನು ತೆರೆದಿದ್ದೇನೆ. ನನ್ನ ನಾಲಿಗೆ ನನ್ನ ಬಾಯಲ್ಲಿ ಮಾತನಾಡುತ್ತದೆ.
3ನನ್ನ ಮಾತುಗಳು ನನ್ನ ಹೃದಯದ ಯಥಾರ್ಥತೆಯಿಂದ ಇರುವವು ಮತ್ತು ನನ್ನ ತುಟಿಗಳು ವಿವೇಕವನ್ನು ಸ್ಪಷ್ಟವಾಗಿ ಉಚ್ಚರಿಸುತ್ತವೆ.
4ದೇವರ ಆತ್ಮನು ನನ್ನನ್ನು ಉಂಟುಮಾಡಿದನು; ಸರ್ವಶಕ್ತನ ಶ್ವಾಸವು ನನಗೆ ಜೀವವನ್ನು ಕೊಟ್ಟಿತು.
5ನೀನು ನನಗೆ ಉತ್ತರ ಕೊಡುವದಕ್ಕೆ ಸಾಧ್ಯವಾದರೆ ನಿನ್ನ ಮಾತುಗಳನ್ನು ಸಿದ್ಧಮಾಡಿಕೊಂಡು ನನ್ನ ಮುಂದೆ ನಿಂತುಕೋ.
ಈ ವಚನವನ್ನು ಇತರ ಭಾಷೆಗಳಲ್ಲಿಯೂ ಓದಿ