ಯಾಜಕಕಾಂಡ 5:17

ಯಾವನಾದರೂ ಕರ್ತನು ನಿಷೇಧಿಸಿದ ಆಜ್ಞೆ ಗಳಲ್ಲಿ ಯಾವದನ್ನಾದರೂ ಮಾಡಿ ಪಾಪಮಾಡಿದರೆ ಅದು ಅವನಿಗೆ ತಿಳಿಯದಿದ್ದಾಗ್ಯೂ ಅವನು ಅಪರಾಧಿ ಯಾಗಿರುವನು, ಅವನು ತನ್ನ ಅಪರಾಧವನ್ನು ಹೊತ್ತು ಕೊಳ್ಳುವನು.

ಸಂದರ್ಭದೊಂದಿಗೆ ಓದಿ · ಯಾಜಕಕಾಂಡ 5

15ಯಾವನಾದರೂ ಅತಿಕ್ರಮಿಸಿ ಕರ್ತನ ಪರಿಶುದ್ಧ ವಾದವುಗಳನ್ನು ಅರಿಯದೆ ಪಾಪಮಾಡಿದ್ದರೆ ಅವನು ತನ್ನ ಅತಿಕ್ರಮಕ್ಕಾಗಿ ತನ್ನ ಹಿಂಡುಗಳಿಂದ ದೋಷವಿಲ್ಲದ ಟಗರನ್ನು ನಿನ್ನ ಅಂದಾಜಿನ ಪ್ರಕಾರ ಪವಿತ್ರ ಸ್ಥಳದ ಶೆಕೆಲುಗಳಿಗನುಸಾರವಾಗಿ ಬೆಳ್ಳಿಯ ಶೆಕೆಲುಗಳನ್ನು ಅತಿ ಕ್ರಮದ ಬಲಿಗಾಗಿ ಕರ್ತನಿಗೆ ತರಬೇಕು.

16ಪರಿಶುದ್ಧ ವಾದದ್ದಲ್ಲದೆ ಮಾಡಿದ ಕೇಡಿಗೆ ಬದಲು ಕೊಟ್ಟು ಅದಕ್ಕೆ ಐದನೇ ಪಾಲನ್ನು ಕೂಡಿಸಿ ಅದನ್ನು ಯಾಜಕನಿಗೆ ಕೊಡಬೇಕು, ಯಾಜಕನು ಅವನಿಗಾಗಿ ಅತಿಕ್ರಮದ ಬಲಿಯಾದ ಟಗರಿನಿಂದ ಪ್ರಾಯಶ್ಚಿತ್ತಮಾಡಬೇಕು, ಆಗ ಅದು ಅವನಿಗೆ ಕ್ಷಮಿಸಲ್ಪಡುವದು.

17ಯಾವನಾದರೂ ಕರ್ತನು ನಿಷೇಧಿಸಿದ ಆಜ್ಞೆ ಗಳಲ್ಲಿ ಯಾವದನ್ನಾದರೂ ಮಾಡಿ ಪಾಪಮಾಡಿದರೆ ಅದು ಅವನಿಗೆ ತಿಳಿಯದಿದ್ದಾಗ್ಯೂ ಅವನು ಅಪರಾಧಿ ಯಾಗಿರುವನು, ಅವನು ತನ್ನ ಅಪರಾಧವನ್ನು ಹೊತ್ತು ಕೊಳ್ಳುವನು.

18ಅಲ್ಲದೆ ಅವನು ಹಿಂಡಿನೊಳಗಿಂದ ದೋಷವಿಲ್ಲದ ಒಂದು ಟಗರನ್ನು ನಿನ್ನ ಅಂದಾಜಿ ಗನುಸಾರ ಅತಿಕ್ರಮದ ಬಲಿಗಾಗಿ ಯಾಜಕನ ಬಳಿಗೆ ತರಬೇಕು; ತನ್ನ ಅಜ್ಞಾನದಲ್ಲಿ ಅವನು ಉದ್ದೇಶವಿಲ್ಲದೆ ಮಾಡಿದ ತಪ್ಪಿಗಾಗಿ ಯಾಜಕನು ಪ್ರಾಯಶ್ಚಿತ್ತವನ್ನು ಮಾಡಬೇಕು. ಅದು ಅವನಿಗೆ ಕ್ಷಮಿಸಲ್ಪಡುವದು.

19ಇದು ಅತಿಕ್ರಮದ ಬಲಿಯಾಗಿದೆ; ಅವನು ನಿಶ್ಚಯ ವಾಗಿಯೂ ಕರ್ತನಿಗೆ ವಿರುದ್ಧವಾಗಿ ಅತಿಕ್ರಮಿಸಿದ್ದಾನೆ ಅಂದನು.

ಯಾಜಕಕಾಂಡ 5 ಸಂಪೂರ್ಣವಾಗಿ ಓದಿ

ಈ ವಚನವನ್ನು ಇತರ ಭಾಷೆಗಳಲ್ಲಿಯೂ ಓದಿ

KJV தமிழ் తెలుగు हिन्दी